ಕಾರಣಾಂತರಗಳಿಂದ ಬೆಂಗಳೂರಿನ ಹಲವು ನಗರಗಳಲ್ಲಿ ಇಂದು ಮತ್ತು ನಾಳೆ. ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಮತ್ತು ನಾಳೆ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಕಡಿತವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಇಂತಿವೆ:
ರಾಜರಾಜೇಶ್ವರಿನಗರ ಹಾಗೂ ಬಾಪೂಜಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಬಾಪೂಜಿ ನಗರ, ಕವಿಕಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ, ಐಯ್ಯಣ್ಣ ಶೆಟ್ಟಿ ಲೇಔಟ್, ಗಣಪತಿನಗರ, ಪ್ರೈಡ್ ಅಪಾ ರ್ಟ್ಮೆಂಟ್, ದೀಪಾಂಜಲಿನಗರ, ಪಟೇಲ್ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಚ್ ಇಎಲ್, ಮುತ್ತಾಚಾರಿ ಕೈಗಾರಿಕಾ ಪ್ರದೇಶ, ಜ್ಯೋತಿ ನಗರ, ಗಂಗೊಂಡನಹಳ್ಳಿ, ಅಜಿತ್ ಸೇತ್ ಕೈಗಾರಿಕಾ ಪ್ರದೇಶ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನ ಪುರದ ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸಟನ್ನನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್. ಆರ್ಆರ್ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅತ್ತಿಬೆಲೆ, ಆನೆಕಲ್ ಪಟ್ಟಣ, ಆನೇಕಲ್ ಗ್ರಾಮಾಂತರ, ಪಾಲ್ಡೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಪೂರು, ಅವಡದೇನಹಳ್ಳಿ, ಬ್ಯಾಗಡದೇನಹಳ್ಳಿ, ವಿಬಿಹೆಚ್ಸಿ ಅಪಾರ್ಟ್ಮೆಂಟ್, ಕಾಡಅಗ್ರಹಾರ, ಚಿಕ್ಕಹಾಗಡೆ, ದೊಡ್ಡಪಾಗಡೆ, ಸಮಂದೂರು ವ್ಯಾಪ್ತಿಯ ರಾಚಮಾನ ಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆಪುರ, ಪಿ ಗೊಲ್ಲಹಳ್ಳಿ, ತೆಲಗರಹಳ್ಳಿ, ವಣಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನವೂ ವಿದ್ಯುತ್ ವ್ಯತ್ತಯವಾಗಲಿದೆ.