ಅಲ್ಲು ಅರ್ಜುನ್ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಭರ್ಜರಿ ವೆಲ್ ಕಮ್ ಸಿಕ್ಕಿದೆ. ಪತ್ನಿ ಹಗ್ ಮಾಡಿ ಸ್ವಾಗತ ಕೋರಿದ್ದಾರೆ. ಕುಂಬಳಕಾಯಿ ಒಡೆದು ಸ್ವಾಗತ ಕೋರಿದ್ದಾರೆ. ಈ ಒಂದು ಖುಷಿಯಲ್ಲಿಯೇ ಅಲ್ಲು ಅರ್ಜುನ್ ಮಾಧ್ಯಮಕ್ಕೂ ತಮ್ಮ ರಿಯಾಕ್ಷನ್ ಕೊಟ್ಟಿದ್ದಾರೆ. ಕಾನೂನಿನ ಮೇಲೆ ತಮಗೆ ನಂಬಿಕೆ ಇದೆ. ಮೃತ ಮಹಿಳೆಗೆ ಕ್ಷಮೆ ಕೇಳುತ್ತೇನೆ. ಆದರೆ, ಇದು ಆಕಸ್ಮಿಕವಾಗಿಯೇ ನಡೆದ ಘಟನೆ ಆಗಿದೆ. ಆದರೂ ನಾನು ಮೃತ ಮಹಿಳೆಯ ಕುಟುಂಬಕ್ಕೆ ನಾನು ಮನಸಾರೆ ಕ್ಷಮೆ ಕೇಳುತ್ತೇನೆ ಅಂತಲೇ ಹೇಳಿದ್ದಾರೆ ಅಲ್ಲು ಅರ್ಜುನ್.
ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ನೇರವಾಗಿ ಗೀತಾ ಆರ್ಟ್ಸ್ ಕಚೇರಿಗೆ ತೆರಳಿದರು. ಗೀತಾ ಕಲಾ ಕಚೇರಿಯಿಂದ ಮನೆಗೆ ತೆರಳಿದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ನಿವಾಸದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಭಿಮಾನಿಗಳು ಒಳಗೆ ಪ್ರವೇಶಿಸದಂತೆ ಎರಡೂ ಕಡೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
ನಟ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಜುಬ್ಲಿ ಹಿಲ್ಸ್ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಕಾನೂನನ್ನು ಗೌರವಿಸುತ್ತೇನೆ. ಕಾನೂನಿಗೆ ಬದ್ಧನಾಗಿರುತ್ತೇನೆ. ಸಂತ್ರಸ್ತ ಕುಟುಂಬಕ್ಕೆ ಆಗಿರುವ ನಷ್ಟವನ್ನು ತುಂಬಲಾರದು. ಮತ್ತೊಮ್ಮೆ ಕುಟುಂಬಕ್ಕೆ ನನ್ನ ಸಂತಾಪಗಳು. ಸಿನಿಮಾ ನೋಡಲು ಹೋದಾಗ ಅನಿರೀಕ್ಷಿತವಾಗಿ ಘಟನೆ ನಡೆದಿದೆ. ಉದ್ದೇಶಪೂರ್ವಕವಾಗಿ ಮಾಡಿಲ್ಲ ‘ ಎಂದು ಅಲ್ಲು ಅರ್ಜುನ್ ಇದೇ ವೇಳೆ ಸ್ಪಷ್ಟಪಡಿಸಿದರು.
ಜೈಲಿನಿಂದ ರಿಲೀಸ್ ಆಗಿ ಮನೆಗೆ ಬರುತ್ತಿದ್ದಂತೆ, ಅಲ್ಲು ಅರ್ಜುನ್ಗೆ ಪತ್ನಿ ಪ್ರೀತಿಯಿಂದ ಅಪ್ಪುಗೆ ಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಭಾವುಕರಾದರು. ಇದಾದ ಬಳಿಕ ಕುಂಬಳಕಾಯಿ ಒಡೆದು ಅಲ್ಲು ಅರ್ಜುನ್ಗೆ ದೃಷ್ಟಿ ತೆಗೆದಿದ್ದಾರೆ. ಪುಷ್ಪ-2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಅಲ್ಲು ಅರ್ಜುನ್ ಬಂಧನ ದೇಶಾದ್ಯಂತ ಸಂಚಲನ ಸಷ್ಟಿಸಿದೆ. 4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್ ಸಿಕ್ಕರೂ ಕೂಡ ಅಲ್ಲು ಅರ್ಜುನ್ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.