ಕನ್ನಡ ಬಿಗ್ಬಾಸ್ 12ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. 8 ಮಂದಿಯಲ್ಲಿ ಈ ವಾರ ಓರ್ವ ಸ್ಪರ್ಧಿಗೆ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಬಾಗಿಲು ಓಪನ್ ಆಗಲಿದೆ.
ಇದರ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು ಇವೆ. ಬಿಗ್ ಬಾಸ್ ಮನೆಗೆ ಬರುವಾಗ ತಮ್ಮ ಜೊತೆ ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆಯ ಬಂಗಾರವನ್ನು ಸುರೇಶ್ ತಂದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಈ ಆಭರಣಗಳನ್ನು ಧರಿಸುತ್ತಾರೆ. ಇನ್ನು ನಿನ್ನೆ ಸಂಚಿಕೆಯಲ್ಲಿ ಸುರೇಶ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅಧಿಕಾರವನ್ನು ಸ್ವೀಕರಿಸಿ ಕ್ಯಾಪ್ಟನ್ ರೂಮ್ ಪ್ರವೇಶಿಸುವಾಗ ಸುರೇಶ್ ಅವರು ಮೈ ತುಂಬ ಬಂಗಾರದ ಆಭರಣಗಳನ್ನು ಧರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂಬುದು ಗೋಲ್ಡ್ ಸುರೇಶ್ ಅವರು ಬಹುಕಾಲದ ಆಸೆ ಆಗಿತ್ತು. ಆದರೆ ಇಷ್ಟು ವಾರಗಳ ಕಾಲ ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿಂದಿನ ವಾರಗಳಲ್ಲಿ ಟಾಸ್ಕ್ ಆಡುವಾಗ ಅವರಿಗೆ ಗಾಯ ಆಗಿತ್ತು. ಕಾಲಿಗೆ ಪಟ್ಟಾಗಿದ್ದರಿಂದ ಅನೇಕ ಟಾಸ್ಕ್ನಿಂದ ಅವರು ಹೊರಗೆ ಉಳಿಯಬೇಕಾಗಿತ್ತು. ಆದರೆ ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಂದು ಅವರು ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿ ಆಗಿದ್ದಾರೆ.