ನಟ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ನಂತರ ಮನೆಗೆ ಬಂದ ಅಲ್ಲು ಅರ್ಜುನ್ ಗೆ ಪತ್ನಿ ಸ್ನೇಹ ರೆಡ್ಡಿ ಬಿಗಿದಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಮನೆಗೆ ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ , ನಿರ್ಮಾಪಕ ದಿಲ್ ರಾಜ್ ಮತ್ತು ನಿರ್ದೇಶಕ ಸುಕುಮಾರ್, ಮತ್ತು ನಾಗಚೈತನ್ಯ ಮತ್ತು ರಾನಾ ದಗ್ಗುಬಾಟಿ ಕೂಡ ಭೇಟಿ ನೀಡಿದ್ದಾರೆ.
ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿತ್ತು. ಮೃತ ಮಹಿಳೆಯ ಪತಿಯ ದೂರು ಆಧರಿಸಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿತ್ತು. ಆದರೆ ಇದೀಗ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡಿದೆ. ನಿನ್ನೆ ರಾತ್ರಿಯಿಡೀ ಜೈಲಿನಲ್ಲಿ ಕಾಲ ಕಳೆದ ನಟ ಅಲ್ಲು ಅರ್ಜುನ್ ಜಾಮೀನು ಪ್ರಕ್ರಿಯ ಪೂರ್ತಿಗೊಳಿಸಿ ಇದೀಗ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಜೈಲಿನ ಹಿಂದಿನ ಗೇಟ್ ನಿಂದ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ.
ಅಲ್ಲು ಅರ್ಜುನ್ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಭರ್ಜರಿ ವೆಲ್ ಕಮ್ ಸಿಕ್ಕಿದೆ. ಪತ್ನಿ ಹಗ್ ಮಾಡಿ ಸ್ವಾಗತ ಕೋರಿದ್ದಾರೆ. ಕುಂಬಳಕಾಯಿ ಒಡೆದು ಸ್ವಾಗತ ಕೋರಿದ್ದಾರೆ. ಅಲ್ಲು ಅರ್ಜುನ್ ಮನೆಗೆ ಬರುತ್ತಿದ್ದಂತೇ ಮನೆಗೆ ಟಾಲಿವುಡ್ ಸೆಲೆಬ್ರೆಟಿಗಳ ದಂಡೇ ಹರಿದು ಬರುತ್ತಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಮನೆಗೆ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ವಿಜಯ್ ಸಹೋದರ ಆನಂದ್ ದೇವರಕೊಂಡ, ನಿರ್ಮಾಪಕ ದಿಲ್ ರಾಜ್ ಮತ್ತು ನಿರ್ದೇಶಕ ಸುಕುಮಾರ್, ಮತ್ತು ನಾಗಚೈತನ್ಯ ಕೂಡ ಭೇಟಿ ನೀಡಿದ್ದಾರೆ ಕೂಡ ಭೇಟಿ ನೀಡಿ ನಟ ಅಲ್ಲು ಅರ್ಜುನ್ ಗೆ ಸಾಂತ್ವನ ಹೇಳಿದ್ದಾರೆ.