ಬಿಗ್ ಬಾಸ್ ಸೀಸನ್ 11 ಹಲವು ಕಾರಣಗಳಿಗೆ ಸುದ್ದಿಯಾಗ್ತಾನೇ ಇದೆ. ಸೀಸನ್ ಶುರುವಾದಾಗಿನಿಂದ ಸುದೀಪ್ ಅವ್ರ ಕಾರಣಕ್ಕೆ, ಮನೆಯಲ್ಲಿರೋ ಕಂಟೆಸ್ಟಂಟ್ಗಳ ಕಾರಣಕ್ಕೆ, ಮನೆಯಲ್ಲಾಗೋ ಜಗಳಗಳ ಕಾರಣಕ್ಕೆ ಸುದ್ದಿಯಾಗ್ತಾನೇ ಇದೆ. ಬಿಗ್ ಬಾಸ್ 11ನೇ ಸೀಸನ್ ಮುಗಿಥಾ ಬಂದ್ರು ಸೀಸನ್ಗಿರೋ ಪಾಪ್ಯುಲಾರಿಟಿ ಮಾತ್ರ ಕಮ್ಮಿಯಾಗಿಲ್ಲ. ಈಗ ಇದೇ ಬಿಗ್ ಬಾಸ್ ನಿಂದಾಗಿ ಕೆಲವು ವರ್ಷಗಳಿಂಧ ೨ನೇ ಸ್ಥಾನದಲ್ಲಿದ್ದ ಕಲರ್ಸ್ ಕನ್ನಡ ಟಿಆರ್ಪಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಜೀ ಕನ್ನಡ ತನ್ನ ವರ್ಣರಂಜಿತ ಕಾರ್ಯಕ್ರಮಗಳು ಹಾಘೂ ಧಾರಾವಾಹಿಗಳಿಂದ ವರ್ಷಗಟ್ಟಲೆ ನಂ.೧ ಸ್ಥಾನದಲ್ಲಿತ್ತು, ಆದ್ರೀಗ ಕಲರ್ಸ್ ಕನ್ನಡ ಬಿಗ್ ಬಾಸ್ ಕೃಪೆಯಿಂದಾಗಿ ಈ ವಾರ ಜೀ ಕನ್ನಡ ವಾಹಿನಿಯನ್ನು ಹಿಂದಿಕ್ಕಿದೆ. BARC ಬಿಡುಗಡೆ ಮಾಡಿರೋ ಅಂಕಿ ಅಂಶಗಳ ಪ್ರಕಾರ ಅರ್ಬನ್ ಕರ್ನಾಟಕ ಮಾರ್ಕೆಟ್ನಲ್ಲಿ ಜೀ ಕನ್ನಡ ಈ ವಾರ 612 GRP ಗಳನ್ನ ಗಳಿಸಿದ್ರೆ, ಕಲರ್ಸ್ ಕನ್ನಡ 645 GRP ಗಳಿಸೋ ಮೂಲಕ ನಂ.1 ಸ್ಥಾನಕ್ಕೇರಿದೆ.
ಕಲರ್ಸ್ ಕನ್ನಡ HD+SD ಸೇರಿ ಜೀ ಕನ್ನಡದ HD+SD ಗಿಂತ ಹೆಚ್ಚು GRP ಗಳಿಸೋ ಮೂಲಕ ನಂ.1 ಸ್ಥಾನಕ್ಕೇರಿದೆ. ಈ ಬಾರಿಯ ಬಿಗ್ ಬಾಸ್ ಹಲವು ದಾಖಲೆಗಳನ್ನು ಮಾಡಿತ್ತು, ಅತ್ಯಂತ ಹೆಚ್ಚಿನ ಲಾಂಚ್ ರೇಟಿಂಗ್ ಗಳಿಸಿದ್ದ ಬಿಗ್ ಬಾಸ್, ನಂತ್ರದ ವಾರದಲ್ಲಿ ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು TRP ಗಳಿಸೋ ಮೂಲಕ ಮತ್ತೊಂದು ಸಾಧನೆ ಮಾಡಿತ್ತು. ಮತ್ತೀಗ ಕಲರ್ಸ್ ಕನ್ನಡ ವಾಹಿನಿಯನ್ನು ನಂ.1 ಮಾಡಿರೋದು ವಾಹಿನಿಗೆ ಸಂತಸ ತಂದಿದೆ.