ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಜಾಮೀನು ಪಡೆದು ರಿಲೀಸ್ ಆಗಿದ್ದ ದರ್ಶನ್ ಅವರಿಗೆ ಈ ಕೇಸ್ನಲ್ಲಿ ಜಾಮೀನು ಸಿಕ್ಕಿದ್ದು ಅವರು ಹಾಗೂ ಪವಿತ್ರಾ ಗೌಡ ಸೇರಿ 7 ಜನರು ಡಿಸೆಂಬರ್ 13ರಂದು ಜಾಮೀನು ಪಡೆದಿದ್ದಾರೆ.
ಇದೆಲ್ಲವೂ ಕೊಲ್ಲೂರು ಮೂಕಾಂಬಿಕೆಯ ವರಪ್ರಸಾದವೇ? ಚಂಡಿಕಾಯಾಗದ ಪ್ರತಿಫಲ ಸಿಕ್ಕಿತಾ? ವಿಜಯಲಕ್ಷ್ಮಿ ಕೂಗು ಕೊಲ್ಲೂರು ಮೂಕಾಂಬಿಕೆಗೆ ಕೇಳಿತಾ? ದರ್ಶನ್ ಬೇಲ್ ಸಿಗದೆ ಜೈಲಿನಲ್ಲಿ ಒದ್ದಾಡುತ್ತಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ದೇವಾಸ್ಥಾನಗಳಿಗೆ ಭೇಟಿ ಕೊಟ್ಟು ಗಂಡನ ಬಿಡುಗಡೆಯಾಗಿ ಪ್ರಾರ್ಥಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನದಲ್ಲಿ ಮಹಾ ಚಂಡಿಕಾಯಾಗ ಮಾಡಿದ್ದರು.
ದರ್ಶನ ಬಿಡುಗಡೆಗಾಗಿ ಪ್ರಾಥಿಸಿದ ವಿಜಯಲಕ್ಷ್ಮೀ ಶಕ್ತಿ ಪೀಠದಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅಂತೂ ವಿಜಯಲಕ್ಷ್ಮಿ ಪ್ರಾರ್ಥನೆಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ಫಲ ಕೊಟ್ಟಿದ್ದಾಳೆ. ಎರಡು ದಿನ ದೇವಸ್ಥಾನದಲ್ಲಿ ವಾಸ್ತವ್ಯವಿದ್ದು ಪೂಜೆಯಲ್ಲಿ ತೊಡಗಿದ್ದ ವಿಜಯಲಕ್ಷ್ಮಿ ಅವರಿಗೆ ಫಲ ಸಿಕ್ಕಿದೆ.
ಮುಕಾಂಬಿಕಾ ಸನ್ನಿಧಾನದಲ್ಲಿ ನಡೆಸುವ ಚಂಡಿಕಾ ಹೋಮದ ಬಗ್ಗೆ ನರಸಿಂಹ ಅಡಿಗ ಮಾಹಿತಿ ಕೊಟ್ಟಿದ್ದಾರೆ. ಕ್ಷೇತ್ರದ ಪ್ರಧಾನ ಅರ್ಚಕ ನರಸಿಂಹ ಅಡಿಗ ಅವರು ಈ ಕುರಿತು ಮಾತನಾಡಿ, ಅನೇಕ ಗಣ್ಯರು ಬಂದು ಇಲ್ಲಿ ಚಂಡಿಕಾ ಹೋಮ ನಡೆಸಿದ್ದಾರೆ. ತಮ್ಮ ಕಷ್ಟವನ್ನು ದೇವಿಯ ಸನ್ನಿಧಿಯಲ್ಲಿ ಹೇಳಿಕೊಂಡು ಫಲ ಪಡೆದಿದ್ದಾರೆ. ಇದೊಂದು ಶಕ್ತಿಪೀಠ. ಚಂಡಿಕಾ ಹೋಮ ಈ ಕ್ಷೇತ್ರದಲ್ಲಿ ಸಲ್ಲಿಸುವ ಅಪೂರ್ವ ಹರಕೆ. ಅನೇಕರು ಚಂಡಿಕಾ ಹೋಮ ನಡೆಸಿ ಉತ್ತಮ ಫಲ ಪಡೆದಿದ್ದಾರೆ. ಭಕ್ತರ ಬೇಡಿಕೆಗಳನ್ನು ತಾಯಿ ಪೂರೈಸುತ್ತಾಳೆ. ಮೂಕಾಂಬಿಕಾ ಸನ್ನಿಧಿಯಲ್ಲಿ ಪ್ರತಿದಿನ ಚಂಡಿಕಾಯಾಗ ನಡೆಯುತ್ತದೆ ಎಂದಿದ್ದಾರೆ.