ಡಿ.ಗುಕೇಶ್ ಈ ಒಂದು ಹೆಸರು ಈಗ ಭಾರತೀಯರ ಹೆಮ್ಮೆಯ ಹೆಸರು. ಇಷ್ಟು ಕಿರಿಯ ವಯಸ್ಸಿನ ಹುಡುಗ ಮಾಡಿದ ಸಾಧನೆಗೆ ಈಗ ಎಲ್ಲರೂ ಶ್ಲಾಘಿಸಿದ್ದಾರೆ. ಗುಕೇಶ್ನ ಶಿಸ್ತಿನ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಈ ಗುಕೇಶ್ ಬಗ್ಗೆ ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಗಳನ್ನು ತಿಳಿಯೋಣ.
ಗುಕೇಶ್ ಚೆನ್ನೈನಲ್ಲಿ ಮೇ 29, 2006ರಲ್ಲಿ ಜನಿಸಿದರು. ತಂದೆ ರಜಿನಿಕಾಂತ್, ಇಎನ್ಟಿ ಸರ್ಜನ್, ತಾಯಿ ಡಾ ಪದ್ಮಾ ಮೈಕ್ರೋಬಯಾಲಜಿಸ್ಟ್. ಹೀಗಾಗಿ ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಮನೆಯ ವಾತಾವರಣವೇ ಗುಕೇಶ್ ಬದುಕಿಗೆ ಒಂದು ಬಲಿಷ್ಠ ಬುನಾದಿಯಾಗಿ ಏರ್ಪಟ್ಟಿತ್ತು. ಗುಕೇಶ್ನ ಚೆಸ್ ಆಟ 7ನೇ ವಯಸ್ಸಿನಿಂದಲೇ ಶುರುವಾಗಿದೆ.
2024ರಲ್ಲಿ ಬಂದಿರುವ ವರದಿಯ ಪ್ರಕಾರ ಗುಕೇಶ್ ಬಳಿ ಇರುವ ಒಟ್ಟು ಆಸ್ತಿ 8.26 ಕೋಟಿ ರೂಪಾಯಿ. ಅತಿಹೆಚ್ಚು ಹಣ ಆತನಿಗೆ ಹರಿದು ಬಂದಿದ್ದು ಚೆಸ್ ಪಂದ್ಯದಲ್ಲಿ ಗೆಲ್ಲುವ ಮೂಲಕವೆ ಆಗಿದೆ. ಬಳಿಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳು ಕೂಡ ಇವನ ಸಂಪತ್ತಿಗೆ ಕೊಡುಗೆಗಳನ್ನು ಕೊಟ್ಟಿವೆ. ಈತ ಗೆದ್ದಾಗಲೆಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಆರ್ಥಿಕ ಸಹಾಯ ಮಾಡಿವೆ. ಈ ಮೂಲಕ ಗುಕೇಶ್ ಒಟ್ಟು 8.26 ಕೋಟಿ ರೂಪಾಯಿಯಾಗಿದೆ.