ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ಮದುವೆಯಾಗಲಿದ್ದಾರೆ. ಖ್ಯಾತ ನಟ ಡಾಲಿ ಧನಂಜಯ್ ಅವರ ಮದುವೆ ಇತ್ತೀಚೆಗೆ ನಿಶ್ಚಯವಾಗಿತ್ತು. ಲಗ್ನಪತ್ರಿಕೆ ವೈರಲ್ ಆದ ಬೆನ್ನಲ್ಲೇ ಇದೀಗ ಡಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮದುವೆ ಆಮಂತ್ರಣ ನೀಡಿದ್ದಾರೆ.
ಭಾವಿ ಪತ್ನಿ ಧನ್ಯತಾ ಜೊತೆ ಹೋಗಿ ಸಿಎಂ ಅವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 15-16 ಕ್ಕೆ ಡಾಲಿ ಧನ್ಯತಾ ಮದುವೆ. ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆ ಡಾಲಿ ಪ್ಲ್ಯಾನ್ ಮಾಡಿದ್ದಾರೆ.