ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮತ್ತು ಹೆಚ್ಚಿನ ಮೈಲೇಜ್ ನೀಡುವ ಭಾರತದ ಟಾಪ್ 10 ಮೈಲೇಜ್ ಬೈಕುಗಳ ಮಾಹಿತಿ ಇಲ್ಲಿದೆ ನೋಡಿ.
ಬಜಾಜ್ ಪ್ಲಾಟಿನಾ : ಏಪ್ರಿಲ್ 2006 ರಲ್ಲಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ ಬೈಕ್ 102 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಲೀಟರಿಗೆ 73.5 ಕಿಮೀ ಮೈಲೇಜ್ ನೀಡುತ್ತದೆ.
ಟಿವಿಎಸ್ ಸ್ಪೋರ್ಟ್ಸ್: ಮಾರ್ಚ್ 2010 ರಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಪೋರ್ಟ್ 109.7 ಸಿಸಿ ಎಂಜಿನ್ ಮತ್ತು 10 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದು 70 ಕಿಮೀ ಮೈಲೇಜ್ ನೀಡುತ್ತದೆ.
ಬಜಾಜ್ CT 110: 115.45 ಸಿಸಿ ಇಂಜಿನ್ ಪವರ್ ಹೊಂದಿರುವ ಬಜಾಜ್ CT 110, 2019 ರಲ್ಲಿ ಬಿಡುಗಡೆಯಾಗಿ ಲೀಟರಿಗೆ 70 ಕಿಮೀ ಮೈಲೇಜ್ ನೀಡುತ್ತದೆ.
ಬಜಾಜ್ ಪ್ಲಾಟಿನಾ 110: 11 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿರುವ ಬಜಾಜ್ ಪ್ಲಾಟಿನಾ 110, ಜೂನ್ 2019ರಲ್ಲಿ ಬಿಡುಗಡೆಯಾಗಿ ಲೀಟರಿಗೆ 70ಕಿಮೀ ಮೈಲೇಜ್ ನೀಡುತ್ತದೆ.
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ : 109.7 ಸಿಸಿ ಎಂಜಿನ್ ಪವರ್ ಹೊಂದಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬಂದು ಲೀಟರಿಗೆ 68 ಕಿಮೀ ಮೈಲೇಜ್ ನೀಡುತ್ತದೆ.
ಟಿವಿಎಸ್ ರೇಡಿಯಾನ್: 2018 ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಟಿವಿಎಸ್ ರೇಡಿಯಾನ್ ಬೈಕ್ ಲೀಟರಿಗೆ 68 ಕಿಮೀ ಮೈಲೇಜ್ ನೀಡುತ್ತದೆ.
ಹೋಂಡಾ SP 125: 124 ಸಿಸಿ ಎಂಜಿನ್ ಹೊಂದಿರುವ ಹೋಂಡಾ SP 125 ಬೈಕ್, 2019 ರ ನವೆಂಬರ್ನಲ್ಲಿ ಬಿಡುಗಡೆಯಾಗಿ ಲೀಟರಿಗೆ 65 ಕಿಮೀ ಮೈಲೇಜ್ ನೀಡುತ್ತದೆ.
ಹೀರೋ HF ಡಿಲಕ್ಸ್: ಅಕ್ಟೋಬರ್ 2013 ರಲ್ಲಿ ಬಿಡುಗಡೆಯಾದ ಹೀರೋ HF ಡಿಲಕ್ಸ್ 1 ಲೀಟರ್ ಪೆಟ್ರೋಲಿಗೆ 65 ಕಿಮೀ ಮೈಲೇಜ್ ನೀಡುತ್ತದೆ.
ಹೀರೋ ಸ್ಪೆಂಡರ್ ಪ್ಲಸ್ Xtec: 2022 ರಲ್ಲಿ ಬಿಡುಗಡೆಯಾದ ಹೀರೋ ಸ್ಟೆಂಡರ್ ಪ್ಲಸ್ Xtec 1 ಲೀಟರ್ ಪೆಟ್ರೋಲಿಗೆ 60 ಕಿಮೀ ವರೆಗೆ ಮೈಲೇಜ್ ನೀಡುತ್ತದೆ.
ಹೀರೋ ಪ್ಯಾಷನ್ Xtec: 110 ಸಿಸಿ ಎಂಜಿನ್, 10 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿರುವ ಹೀರೋ ಪ್ಯಾಷನ್ Xtec ಲೀಟರಿಗೆ 59 ಕಿಮೀ ಮೈಲೇಜ್ ನೀಡುತ್ತದೆ.