ಬಿಗ್ ಬಾಸ್ ಸೀಸನ್ 11ರ ಆಟ ವಾರದಿಂದ ವಾರಕ್ಕೆ ಜೋರಾಗಿದೆ. ಬಿಗ್ ಬಾಸ್ ಬಿಗೆಸ್ಟ್ ರಿಯಾಲಿಟಿ ಶೋ ಆಗಿದ್ದು, ಅಪಾರ ಪ್ರೇಕ್ಷಕ ಬಳಗವನ್ನು ಹೊಂದಿದೆ. ವಾರ ಕಳೆದು ವೀಕೆಂಟ್ ಎಪಿಸೋಡ್ ನೋಡಲು ಜನ ಕಾಯುತ್ತಿರುತ್ತಾರೆ. ಕಿಚ್ಚ ಸುದೀಪ್ ಖಡಕ್ ಮಾತು, ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳೋದನ್ನು ನೋಡಲು ಫ್ಯಾನ್ಸ್ ಕಾಯ್ತಿರುತ್ತಾರೆ. ಜೊತೆಗೆ ಈ ವಾರ ದೊಡ್ಮನೆಯಿಂದ ಹೊರಗೆ ಹೋಗುವವರು ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿರುತ್ತೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ನಿನ್ನೆ ಶಿಶಿರ್ ಔಟ್ ಆಗಿದ್ದಾರೆ.
ಈ ವಾರದ ಟಾಸ್ಕ್ಗಳಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ, ಮೋಕ್ಷಿತಾ ನಾಮಿನೇಟ್ ಆಗಿದ್ದರು.ವಾರದ ಕತೆ ಕಿಚ್ಚನ ಜೊತೆಯಲ್ಲಿ ತ್ರಿವಿಕ್ರಮ್, ಹನುಮಂತ ಸೇಫ್ ಆಗಿದ್ದರು. ಇದಾದ ಮೇಲೆ ಉಳಿದವರ ಎಲಿಮಿನೇಷನ್ ಪ್ರಕ್ರಿಯೆ ನಡೆದಿತ್ತು. ರಜತ್, ಧನರಾಜ್, ಚೈತ್ರಾ ಕೂಡ ಸೇಫ್ ಆದರು. ಕೊನೆಯದಾಗಿ ಭವ್ಯ ಹಾಗೂ ಶಿಶಿರ್ ಅವರು ಉಳಿದುಕೊಂಡಿದ್ದರು.
ಭವ್ಯ ಹಾಗೂ ಶಿಶಿರ್ ಅವರ ಮಧ್ಯೆ ಈ ವಾರದ ಎಲಿಮಿನೇಷನ್ ರೇಸ್ನಲ್ಲಿ ಭವ್ಯ ಬಚಾವ್ ಆಗಿದ್ದಾರೆ. ಅಂತಿಮವಾಗಿ ಶಿಶಿರ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಜರ್ನಿಯನ್ನು ಮುಗಿಸಿದ್ದಾರೆ.
ಇನ್ನು ಕಳೆದ ವಾರ ಶಿಶಿರ್ ಹೆಚ್ಚು ಆ್ಯಕ್ಟಿವ್ ಆಗಿರಲಿಲ್ಲ. ಜೊತೆಗೆ ಐಶ್ವರ್ಯಾ, ಮೋಕ್ಷಿತಾ ಜೊತೆ ಸೇರಿಕೊಂಡ ಶಿಶಿರ್ ಟಾರ್ಗೆಟ್ ಎಲಿಮಿನೇಷನ್ ಬಗ್ಗೆ ಚರ್ಚೆ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದ್ರು. ಪ್ರೇಕ್ಷಕರಿಂದ ಕಡಿಮೆ ವೋಟ್ ಬಂದಿದ್ದೆ ಶಿಶಿರ್ ಹೊರಗೆ ಹೋಗಲು ಕಾರಣ ಎನ್ನಲಾಗ್ತಿದೆ.