ಇತ್ತೀಚೆಗೆ ನಡೆದಂತಹ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಸ್ಪಿನ್ ಬೌಲರ್ ಆದಂತಹ ಯುಜುವೇಂದ್ರ ಚಹಾಲ್ ಅವರು ಭಾರೀ ಮೊತ್ತಕ್ಕೆ ಖರೀದಿಯಾದ್ರು. ಆರಂಭದಲ್ಲೇ ಚಹಾಲ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾಟ್ ಟೈಟನ್ಸ್ ತಂಡಗಳ ಮಧ್ಯೆ ಬಹಳ ಪೈಪೋಟಿ ನಡೆಯಿತು. ಕೊನೆಗೆ ಪಂಜಾಬ್ ತಂಡ ಚಹಾಲ್ ಅವರನ್ನು 18 ಕೋಟಿಗೆ ಖರೀದಿ ಮಾಡಿದರು.
ಖರೀದಿಗೆ ಮುಂದಾಗಿದ್ದ RCB
ಚಹಾಲ್ ಹೆಸರು ಕೇಳುತ್ತಿದ್ದಂತೆ RCB ಫ್ಯಾನ್ಸ್ ಸಖತ್ ಖುಷಿಯಾಗಿದ್ದರು. RCB ಇವರನ್ನು ಖರೀದಿ ಮಾಡಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಬಿಡ್ ಆರಂಭದಲ್ಲಂತೂ RCB ಇವರನ್ನು ಕೊಳ್ಳಲು ಯಾವುದೇ ಆಸಕ್ತಿ ತೋರಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದಿಂದ ಕೈ ಬಿಡಲಾದ ಚಹಾಲ್ ಖರೀದಿಗೆ ಪೈಪೋಟಿ ನಡೆಯಿತು. ಬಿಡ್ 7 ಕೋಟಿ ದಾಟುತ್ತಿದ್ದಂತೆ ಚೆನ್ನೈ ಹಾಗೂ ಗುಜರಾತ್ ತಂಡಗಳು ಹಿಂದೆ ಸರಿದವು. 14 ಕೋಟಿ ಬಿಡ್ ಆಗಿದ್ದಾಗ RCB ಇವರ ಖರೀದಿಗೆ ಮುಂದಾಗಿತ್ತು. ತನ್ನ ಮಾಜಿ ಆಟಗಾರನನ್ನು ಕೊಳ್ಳಲು ಹಣ ಹೂಡಲು ಆರ್ಸಿಬಿ ಮುಂದಾಯಿತು. ಪಂಜಾಬ್ ಸವಾಲು ಮಾಡಿ ಚಹಾಲ್ ಖರೀದಿ ಮಾಡಿತು.
ಬೆಂಗಳೂರು ತಂಡಕ್ಕೆ ಹಲವು ವರ್ಷಗಳಿಂದ ಕಾಡುತ್ತಿರೋ ದೊಡ್ಡ ಸಮಸ್ಯೆ ಎಂದರೆ ಸ್ಪಿನ್ ಬೌಲರ್ ಕೊರತೆ. ಯಜುವೇಂದ್ರ ಚಹಾಲ್ ಅವರನ್ನು ಕೈ ಬಿಟ್ಟು ತಪ್ಪು ಮಾಡಿದ್ದ RCBಗೆ ಬಳಿಕ ಒಳ್ಳೆಯ ಸ್ಪಿನ್ ಬೌಲರ್ ಸಿಗಲೇ ಇಲ್ಲ. ಚಹಾಲ್ ಐಪಿಎಲ್ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಸೈ ಎನಿಸಿಕೊಂಡಿದ್ದಾರೆ. ತಂಡಕ್ಕೆ ಅಗತ್ಯವಿದ್ದಾಗ ವಿಕೆಟ್ ತೆಗೆಯುವ ಸಾಮರ್ಥ್ಯ ಇದೆ. ವಿಶೇಷ ಎಂದರೆ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್ಸಿಬಿ ಪರ 114 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು. 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಚಹಾಲ್ ಹೈಎಸ್ಟ್ ವಿಕೆಟ್ ಟೇಕರ್ ಆಗಿದ್ದರು.