‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ ದಿನ ಕಳೆದಂತೆಲ್ಲ ಪೈಪೋಟಿ ಜಾಸ್ತಿಯಾಗುತ್ತಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಕಷ್ಟಪಡುತ್ತಿದ್ದಾರೆ. ಈಗ ಎಲ್ಲ ಟಾಸ್ಕ್ನಲ್ಲಿಯೂ ಅಗ್ರೆಷನ್ ಹೆಚ್ಚಾಗುತ್ತಿದೆ.
ಈ ವಾರದ ಆರಂಭದಲ್ಲೇ ಟಾಸ್ಕ್ ವಿಚಾರದಲ್ಲಿ ಗುದ್ದಾಟ ಕೂಡ ಜೋರಾಗಿದೆ. ಕರ್ನಾಟಕ ಖದರ್ ಹಾಗೂ ಕರುನಾಡ ಕಿಲಾಡಿಗಳು ಎಂದು ಸ್ಪರ್ಧಿಗಳನ್ನು ಟೀಮ್ ಮಾಡಲಾಗಿದೆ. ಕರ್ನಾಟಕ ಖದರ್ ತಂಡದಲ್ಲಿ ರಜತ್, ಐಶ್ವರ್ಯಾ, ಮೋಕ್ಷಿತಾ, ಹನುಮಂತ, ಧನರಾಜ್ ಇದ್ದಾರೆ. ಕರುನಾಡ ಕಿಲಾಡಿಗಳು ತಂಡದಲ್ಲಿ ತ್ರಿವಿಕ್ರಮ್, ಮಂಜು, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಗೌತಮಿ ಇದ್ದಾರೆ. ಈ ಎರಡು ಟೀಮ್ ನಡುವೆ ಟಾಸ್ಕ್ ಗುದ್ದಾಟ ನಡುವೆ ಜಡೆ ಜಗಳ ಕೂಡ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗುದ್ದಾಟ ಜೋರಾಗಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಅಗ್ರೆಷನ್ ಆಗಿ ಆಟವಾಡ್ತಿದ್ದಾರೆ. ಟಾಸ್ಕ್ ಆಡುವಾಗ ಐಶ್ವರ್ಯಾ ಸಿಂಧೋಗಿ ಹಾಗೂ ಭವ್ಯಾ ಗೌಡ ಅವರು ಜಟ್ಟು ಹಿಡಿದುಕೊಂಡು ಕಿತ್ತಾಡಿದ್ದಾರೆ. ಭವ್ಯಾ ಬೇಕು ಅಂತಲೇ ನನ್ನ ಜುಟ್ಟು ಹಿಡಿದುಕೊಂಡ್ರು ಅಂತ ನಟಿ ಐಶ್ವರ್ಯಾ ಕೂಗಾಡಿದ್ದಾರೆ. ನಾನು ಬೇಕು ಅಂತ ಹಿಡಿದಿಲ್ಲ ಗುರು ಎಂದು ಭವ್ಯಾ ಕೂಡ ಕೂಗಾಡಿದ್ರು. ಸದ್ಯ ಬಿಗ್ಮನೆಯಲ್ಲಿ ಎಲ್ಲರೂ ಅಗ್ರೆಷನ್ಲ್ಲಿಯೇ ಆಟ ಆಡುತ್ತಿದ್ದಾರೆ.