ಭಾರತವು ಪ್ರಜಾತಂತ್ರ ಹಬ್ಬಕ್ಕೆ ಅಣಿಯಾಗುತ್ತಿದೆ.ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಭಾರತೀಯರು ಉತ್ಸುಕರಾಗಿದ್ದರೆ, ಅತ್ತ ಚೀನಾದ ವಕ್ರದೃಷ್ಟಿ ನಮ್ಮ ದೇಶದ ಚುನಾವಣೆ ಮೇಲೆ ಬಿದ್ದಿದೆ. ಹೌದು..ಕುತಂತ್ರ ಬುದ್ದಿಗೆ ಕುಖ್ಯಾತಿ ಪಡೆದಿರುವ ಚೀನಾ, ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದೆ. ಹೌದು ಲೋಕಸಭಾ ಚುನಾವಣೆ ಕೆಡಿಸಲು AI ಹಾಗೂ ನಕಲಿ ಜಾಲತಾಣ ಬಳಸಿ ಚುನಾವಣೆಗೆ ಅಡ್ಡಿಪಡಿಸಲು ಷಡ್ಯಂತ್ರ ಮಾಡಿದೆಯಂತೆ. ಈ ಬಗ್ಗೆ ಮೈಕ್ರೋಸಾಫ್ಟ್ ಕಂಪನಿಯೂ ಭಾರತಕ್ಕೆ ಎಚ್ಚರಿಕೆ ನೀಡಿದೆ. ಇದೇ ಕುತಂತ್ರಿ ಚೀನಾ, ತೈವಾನ್ ದೇಶದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಎಐ ತಂತ್ರಜ್ಞಾನವನ್ನ ಪ್ರಾಯೋಗಿಕವಾಗಿ ತಾಲೀಮು ನಡಿಸಿತ್ತು. ಈಗ ಇದೇ ರೀತಿ ಜಾಗತಿಕ ಮಟ್ಟದಲ್ಲಿ ಕೃತಕ ಬುದ್ದಿಮತ್ತೆ ಬಳಸಿ ಚುನಾವಣೆಗೆ ಅಡ್ಡಿ ಮಾಡುವ ಉದ್ದೇಶವನ್ನ ಚೀನಾ ಹೊಂದಿದೆ ಎಂಬ ಮಾಹಿತಿ ಬಂದಿದೆ.
ಚೀನಾ ಕುತಂತ್ರ ಏನು ?
ಈ ವರ್ಷ ಪ್ರಪಂಚದಾದ್ಯಂತ ಪ್ರಮುಖ ಚುನಾವಣೆ ನಡೆಯಲಿದ್ದು ಭಾರತ, ಅಮೇರಿಕಾ, ದಕ್ಷಿಣ ಕೊರಿಯಾ ದೇಶದಲ್ಲಿ ನಕಲಿ ಜಾಲತಾಣ ಸೃಷ್ಟಿಸಿ, ಫೇಕ್ ಅಕೌಂಟ್ಗಳನ್ನ ಕ್ರಿಯೇಟ್ ಮಾಡುವುದು, ನೆಗೆಟಿವ್ ಪ್ರಚಾರ ನಡೆಸುವುದು, ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವಿಕೆ, ಕೃತಕ ಬುದ್ದಿಮತ್ತೆ ಬಳಸಿ ಮತದಾರರ ದಿಕ್ಕುತಪ್ಪಿಸುವುದು ಮತ್ತು ಸಾರ್ವಜನಿಕರ ಮನಸ್ಥಿಯನ್ನು ಬದಲಾಯಿಸಲು ಮುಂದಾಗಿದೆ. ಇದಕ್ಕೆ ಡೀಪ್ ಫೇಕ್ ಅಥವಾ ಕೃತಕ ತಂತ್ರಜ್ಞಾನ ಬಳಸಿಕೊಳ್ಳಲು ನರಿ ಬುದ್ದಿಯ ಚೀನಾ ಮುಂದಾಗಿದೆ.