ಇಸ್ರೋ ಸಂಸ್ಥೆಯ ಬಹುದಿನದ ಕನಸು ಗಗನಯಾನಕ್ಕೆ ಮತ್ತೊಬ್ಬ ಗಗನಯಾತ್ರಿಯನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಎಎಕ್ಸ್-4 ಮಿಷನ್ ಜೊತೆಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಸಖಲ ಸಿದ್ಧತೆ ಮಾಡಿಕೊಂಡಿದೆ. ಆಯ್ಕೆಯಾಗಿದ್ದ ನಾಲ್ಕು ಜನರ ಪೈಕಿ ಶುಭಾಂಶು ಶುಕ್ಲಾ ಅವರ ಹೆಸರನ್ನು ಫೈನಲ್ ಮಾಡಲಾಗಿದೆ. ಅಮೆರಿಕಾದ ಖಾಸಗೀ ಕಂಪನಿಯೊಂದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದದ ಪ್ರಕಾರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ಯುರೋಪಿಯನ್ ಸ್ಪೇಸ್ ಎಜಿನ್ಸಿಯಲ್ಲಿ ತರಬೇತಿ ನೀಡಲಾಗುತ್ತದೆ.
ಶುಭಾಂಶು ಶುಕ್ಲಾ ಯುರೋಪಿಯನ್ ಸ್ಪೇಸ್ ಎಜೆನ್ಸಿ ಸೇರಿದಂತೆ ನಾಸಾದಲ್ಲಿಯೂ ತರಬೇತಿ ಪಡೆಯಲಿದ್ದಾರೆ. ಇದರ ಬಳಿಕ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಷನ್ ಏಜೆನ್ಸಿಯಲ್ಲಿಯೂ ತರಬೇತಿ ಪಡೆದುಕೊಳ್ಳಲಿದ್ದಾರೆ. ಐಎಸ್ಎಸ್ ಕಮ್ಯೂನಿಕೇಷನ್ ಸಿಸ್ಟಂ, ಎಮರ್ಜೆನ್ಸಿ ರೆಸ್ಪಾನ್ಸ್ ಪ್ರಕ್ರಿಯೆ ಟ್ರೇನಿಂಗ್ ಸೇರಿದಂತೆ ಇನ್ನೂ ಹಲವು ತರಬೇತಿಗಳನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ಲಾ ಅವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಲ್ಲಿರಲಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ 5 ಪ್ರಯೋಗಗಳನ್ನು ನಡೆಸಲಿದ್ದಾರೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಶುಭಾಂಶು ಶುಕ್ಲಾ ಹೋಗಲಿದ್ದು. ಶುಕ್ಲಾರನ್ನು ಸಮುದ್ರದಲ್ಲಿ ಇಳಿಸಿ ಅವರನ್ನು ವಾಪಸ್ ಕರೆಸಿಕೊಳ್ಳುವ ತರಬೇತಿಯನ್ನು ಶುರು ಮಾಡಲಾಗಿದೆ. ಕೊನೆ ಕ್ಷಣದಲ್ಲಿ ಏನಾದರೂ ಸಮಸ್ಯೆಯಾದರೆ ಪ್ರಶಾಂತ್ ನಾಯರ್ ಅವರನ್ನು ಕಳುಹಿಸಲು ತೀರ್ಮಾನವನ್ನು ಮಾಡಲಾಗಿದೆ. ಬ್ಯಾಕ್ಅಪ್ ಪ್ಲ್ಯಾನ್ ಆಗಿ ಪ್ರಶಾಂತ್ ನಾಯರ್ಗೂ ಕುಡ ತರಬೇತಿ ಪಡೆಯುತ್ತಿದ್ದಾರೆ.