ಟೆಲಿಕಾಂ ಲೇಔಟ್ 220/66/11 ಕೆವಿ ಎನ್ಆರ್ಎಸ್ನಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ರಾಜಾಜಿನಗರ 1ನೇ ಬ್ಲಾಕ್ನಿಂದ 6ನೇ ಬ್ಲಾಕ್ವರೆಗೆ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗ ಳಲ್ಲಿ ಡಿ.18ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗುಬ್ಬಣ್ಣ ಇಂಡಸ್ಟ್ರೀಯಲ್ ಏರಿಯಾ, ಡಾ.ಮೋದಿ ಹಾಸ್ಪಿಟಲ್ ರೋಡ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ಕ್ರಾಸ್ನಿಂದ 5ನೇ ಕ್ರಾಸ್ವರೆಗೆ, ಮಹಾಗಣಪತಿ ನಗರ, ಕೆಚ್ಬಿ ಕಾಲೋನಿ 2ನೇ ಹಂತ ಮತ್ತು ಸುತ್ತಲಿನ ಪ್ರದೇಶಗಳು.
ವೆಸ್ಟ್ ಆಫ್ ಕಾರ್ಡ್ ರೋಡ್, ಎಂ.ಸಿ. ಲೇಔಟ್, ವಿಜಯನಗರ ವಾಟರ್ ಟ್ಯಾಂಕ್, ಹೊಸಹಳ್ಳಿ ಮೈನ್ ರಸ್ತೆ, ಹಂಪಿನಗರ, ಮಾಗಡಿ ಮುಖ್ಯ ರಸ್ತೆ, ಬಿನ್ನಿ ಪೇಟೆ, ಜಗಜೀವನ ರಾಮ್ ನಗರ, ಗೋಪಾಲಪುರ, ಹೊಸಹಳ್ಳಿ, ಹಳೇಗುಡ್ಡದಹಳ್ಳಿ, ಭುವನೇಶ್ವರಿನಗರ, ಗೋರಿ ಪಾಳ್ಯ, ವಿ.ಎಸ್.ಗಾರ್ಡನ್, ಗೂಡ್ಸ್ಶೆಡ್ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.