ಬಳ್ಳಾರಿ ಜಿಲ್ಲೆಯಲ್ಲಿ ವಲಯ ಮಟ್ಟದ ಗೃಹರಕ್ಷಕ ದಳ ಸಿಬ್ಬಂದಿಯ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅಂತಿಮ ತೆರೆ ಎಳೆಯಲಾಗಿತ್ತು..ಕಳೆದ 10 ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ವೃತ್ತಿಪರ ಗೃಹರಕ್ಷಕದಳ ಸಿಬ್ಬಂಧಿಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು..ಕ್ರೀಡಾಕೂಟಕ್ಕೆ ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಜಿಲ್ಲೆಯ ಗೃಹರಕ್ಷಕ ದಳದ ಸಾವಿರಾರು ಸಿಬ್ಬಂಧಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯ IGP ಯವರಾದ ಶ್ರೀ ಲೋಕೇಶ್ ಕುಮಾರ್, ಬಳ್ಳಾರಿ ಜಿಲ್ಲಾ SP ಯವರಾದ ಡಾ.ಶೋಭರಾಣಿ ಹಾಗು ಬಳ್ಳಾರಿ ಜಿಲ್ಲೆಯ ಅಡಿಷನಲ್ SP ಯವರಾದ ಕೆ.ಪಿ ರವಿಕುಮಾರ್ ಭಾಗಿಯಾಗಿದ್ದರು, ಈ ವೇಳೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೆ.ಪಿ ರವಿಕುಮಾರ್ ರವರು ಮಾತನಾಡಿ, ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ 1946 ಮುಂಬೈನಲ್ಲಿ ಪ್ರಾರಂಭವಾದ ಗೃಹರಕ್ಷಕದಳದ ಸೇವೆ ಇಂದು ದೇಶಾದ್ಯಂತ ಹರಡಿದೆ, ಪೊಲೀಸ್ ಇಲಾಖೆಯ ಜತೆ ಜಂಟಿ ಕಾರ್ಯಚರಣೆಯನ್ನು ನಡೆಸಿ ಹಲವು ಸಂಧಿಕ್ತ ಪರಿಸ್ಥಿತಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂಧಿಯ ಸೇವೆ ಶ್ಲಾಘನೀಯವಾದದ್ದು, ಅದರಲ್ಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಗೃಹರಕ್ಷಕ ದಳದ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ, ಈ ರೀತಿಯ ಕ್ರೀಡಾಕೂಟದ ಆಯೋಜನೆಯಿಂದ ಅವರಲ್ಲಿ ಆತ್ಮವಿಶ್ವಾಸ ಹಾಗು ದೈಹಿಕ ಕ್ಷಮತೆಯನ್ನು ಹೆಚ್ಚಿಸಲಿದೆ ಎಂದು ಶ್ಲಾಘನೆಯನ್ನು ವ್ಯಕ್ತಪಡಿಸಿದರು.