ಬೆಂಗಳೂರು: ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ.
ಅಗತ್ಯದಷ್ಟು ರೈಲುಗಳು ಲಭ್ಯವಿಲ್ಲದ ಕಾರಣ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗ ಆರಂಭ ಪ್ರಕ್ರಿಯೆಯು (19.156. ಮೀ.) ಮಾರ್ಚ್ ಬಳಿಕ ಅಂದರೆ 2025ರ ಎರಡನೇ ತ್ರೈಮಾಸಿಕಕ್ಕೆ ಮುಂದೂಡಲ್ಪಟ್ಟಿದ್ದು. ಈ ಭಾಗದ ಟೆಕ್ಕಿಗಳು, ಜನತೆಗೆ ನಿರಾಸೆಯಾಗಿದೆ.
ಈ ಮಾರ್ಗದ ಕಾಮಗಾರಿ ಮುಗಿದು ವರ್ಷ ಕಳೆದಿದ್ದು, ಹತ್ತು ತಿಂಗಳ ಹಿಂದೆಯೇ ಚಾಲಕ ರಹಿತವಾಗಿ ಓಡಿಸಬಹುದಾದ ರೈಲು ಚೀನಾದಿಂದ ಬಂದು ತಲುಪಿದೆ. ಆದರೆ, ಕೋಲ್ಕತ್ತಾದಿಂದ ಬರಬೇಕಾದ ಅಗತ್ಯ ರೈಲುಬೋಗಿ ಸೆಟ್ ಇನ್ನೂ ಬಂದಿಲ್ಲ, ಹೀಗಾಗಿ ಪ್ರಯಾಣಿಕರ ಸೇವೆ ಮುಂದಕ್ಕೆ ಹೋಗುತ್ತಲೇ ಇದೆ.
ಕೋಲ್ಕತ್ತಾದ ತೀತಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ನಿಂದ ಬರಬೇಕಾದ ರೈಲು ಡಿಸೆಂಬರ್ಗೆ ಅಲ್ಲಿಂದ ಹೊರಟು ಜನವರಿ ಅಂತ್ಯಕ್ಕೆ ಬೆಂಗಳೂರು ತಲುಪುವ ಸಾಧ್ಯತೆಯಿದೆ. ಇದು ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಓಡಾಡಲಿರುವ ಎರಡನೇ ರೈಲಾಗಲಿದೆ. ಪೂರ್ಣ ವಾಣಿಜ್ಯ ಸಂಚಾರಕ್ಕೆ ಇನ್ನೊಂದು ರೈಲು ಅಗತ್ಯವಿದ್ದು, ಅದು ಬಂದ ಮೇಲಷ್ಟೇ ವಾಣಿಜ್ಯ ಸಂಚಾರದ ರೂಪುರೇಷನ್ನು ಬಿಎಂಆರ್ಸಿಎಲ್ ಸಿದ್ಧಪಡಿಸಿಕೊಳ್ಳಬೇಕಿದೆ.
ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.
ದರ ಪರಿಷ್ಕರಣೆಗೆ ರಚಿಸಿದ ಸಮಿತಿ ಶೀಘ್ರ ವರದಿ ನೀಡಲಿದೆ. ಯಾವ ರೀತಿ ದರ ನಿಗದಿಯಾಗಲಿದೆ ಎಂಬುದು ವರದಿಯನ್ನು ಆಧರಿಸಿದೆ ಎಂದು ಬಿಎಂಆರ್ ಸಿಎಲ್ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸದ್ಯ 76.95 ಕಿ.ಮೀ. ಉದ್ದದ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ ಈ 10 ಹಾಗೂ ಗರಿಷ್ಠ ದರ 60 ಇದೆ-, ಕಾರ್ಡ್ ಮೇಲೆ ಶೇ.5ರಷ್ಟು ರಿಯಾಯಿತಿ ಇದೆ. ಪರಿಷ್ಕೃತ ದರ ಶೇ.10 – 15 ರಷ್ಟಾಗಬಹುದು ಎನ್ನಲಾಗಿದೆ.ನಮ್ಮ ಮೆಟ್ರೋ ದರ ಪರಿಷ್ಕರಣಾ ಸಮಿತಿ ಸದಸ್ಯರು ಸಿಂಗಾಪುರ, ಹಾಂಕಾಂಗ್ ತೆರಳಿ ಅಲ್ಲಿನ ಮೆಟ್ರೋದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿಕೊಂಡು ಬಂದಿದೆ. ಇನ್ನೆರಡು ವಾರದಲ್ಲಿ ಅಂತಿಮ ವರದಿಯನ್ನು ಬಿಎಂಆರ್ ಸಿಎಲ್ಗೆ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ತೀರ್ಮಾನ ಆಗಲಿದೆ.