ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ದಿಢೀರ್ ಆಚೆ ಬಂದಿದ್ದಾರೆ. ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಅವರ ಈ ಅನಿರೀಕ್ಷಿತ ನಿರ್ಗಮನ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏನಾಯ್ತು? ಕಾರಣವೇನು ಅನ್ನೋ ಕುತೂಹಲದ ಮಧ್ಯೆ ಬಿಗ್ ಬಾಸ್ ಮನೆಯಲ್ಲಿದ್ದ ಸದಸ್ಯರೇ ಈ ಬಗ್ಗೆ ಮಾತನಾಡಿದ್ದಾರೆ.ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ನಿಮ್ಮ ಕುಟುಂಬದ ಸದಸ್ಯರಲ್ಲಿ ತುರ್ತು ಪರಿಸ್ಥಿತಿ ಇದೆ. ಈಗ ಬಿಗ್ ಬಾಸ್ಗಿಂತ ನಿಮ್ಮ ಅಗತ್ಯತೆ ನಿಮ್ಮ ಕುಟುಂಬಸ್ಥರಿಗೆ ಹೆಚ್ಚಿದೆ. ಹೀಗಾಗಿ ತಡ ಮಾಡದೇ ಮನೆಯಿಂದ ಹೊರಡಬೇಕು ಎಂದು ಆದೇಶಿಸಿದರು.
ಬಿಗ್ ಬಾಸ್ ಕೊಟ್ಟ ತುರ್ತು ಮಾಹಿತಿಯಂತೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರು ಗೋಲ್ಡ್ ಸುರೇಶ್ ಅವರಿಗೆ ಪ್ರೀತಿಯ ವಿದಾಯವನ್ನು ಹೇಳಿದ್ದಾರೆ. ಗೋಲ್ಡ್ ಸುರೇಶ್ ಅವರು ಹೊರ ಬಂದ ಕಾರಣ ಏನು ಅನ್ನೋದರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.
ಇದಾದ ಬಳಿಕ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಅನಿವಾರ್ಯತೆ ಏನಿತ್ತು ಎನ್ನುವುದನ್ನು ಖಾಸಗಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ.ಗೋಲ್ಡ್ ಸುರೇಶ್ ಅವರು ನಡೆಸುತ್ತಿದ್ದ ಬ್ಯುಸಿನೆಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು ಎಂದು ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗ್ತಿದೆ. ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ ಕಾರಣ ಮನೆಯವರು ಹೊರಗೆ ಕರೆಸುವಂತೆ ಕೇಳಿಕೊಂಡಿದ್ರು ಎನ್ನಲಾಗ್ತಿದೆ. ಹೀಗಾಗಿ ನಾನು ಹೊರಗೆ ಬಂದೆ ಎಂದು ಸುರೇಶ್ ಖಾಸಗಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಉತ್ತರ ಕರ್ನಾಟಕದ ಸುರೇಶ್ ಅವರು ಸಿಕ್ಕಾಪಟ್ಟೆ ರಿಚ್. ಹೊರಗಡೆ ಸಾವಿರಾರು ಜನರ ಜೊತೆ ಫೈಟ್ ಮಾಡಿ ನಾನು ಗೆದ್ದಿದ್ದೇನೆ, ಒಳಗಡೆ ಹೋಗಿ ನಾನ್ಯಾಕೆ ಗೆಲ್ಲೋಕಗಾಲ್ಲ? ಎಂದು ಯೋಚಿಸಿ ಇವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದರು. ಭರ್ತಿ 2 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರವನ್ನು ಧರಿಸಿಕೊಂಡೇ ಓಡಾಡುತ್ತಾರೆ ಈ ಗೋಲ್ಡ್ ಸುರೇಶ್.
ಗೋಲ್ಡ್ ಸುರೇಶ್ ತಮ್ಮದೇ ರೀತಿಯಲ್ಲಿ ಬಿಗ್ ಬಾಸ್ ಆಟವನ್ನು ತುಂಬಾ ಉತ್ತಮವಾಗಿ ಆಡುತ್ತಿದ್ದರು. ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.ವಾರಗಳು ಕಳೆದಂತೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗ್ತಿದೆ. ಜೊತೆಗೆ ದೊಡ್ಮನೆಯ ಆಟ ಕೂಡ ರಂಗೇರಿದೆ.