ಉಗ್ರಂ ಮಂಜು ಬಗ್ಗೆ ಗೌತಮಿ ಅವರಿಗೆ ಈಗ ಮೊದಲಿದ್ದ ಭಾವನೆ ಇಲ್ಲ. ಆ ಸ್ನೇಹ ಕೂಡ ಅವರಿಗೆ ಬೇಕಾಗಿಲ್ಲ. ಆದರೆ ಇದನ್ನು ಮಂಜು ಅರ್ಥ ಮಾಡಿಕೊಂಡಿಲ್ಲ. ಸ್ವಾಭಿಮಾನ ಬದಿಗಿಟ್ಟು ಮತ್ತೆ ಮತ್ತೆ ಗೌತಮಿಯ ಹಿಂದೆ ಮಂಜು ಹೋಗುತ್ತಿದ್ದಾರೆ. ಹಲವು ಬಾರಿ ಗೌತಮಿ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಿದ್ದರೂ ಕೂಡ ಮಂಜು ವರ್ತನೆ ಹಾಗೆಯೇ ಇದೆ.
ಬಿಗ್ಬಾಸ್ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಆದರೆ ಏಕಾಏಕಿ ಈ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಬಿಗ್ಬಾಸ್ ಮನೆಯಲ್ಲಿ ಮಂಜು ಹಾಗೂ ಗೌತಮಿ ಜಾಧವ್ ಗೆಳತನದ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್ ಮಾಡಿಕೊಂಡು ಬರುತ್ತಿದ್ದ ಮಂಜು ಸದ್ಯ ಶಾಕ್ನಲ್ಲಿದ್ದಾರೆ. ಪ್ರತಿಯೊಂದು ವಿಚಾರಲ್ಲೂ ಗೆಳತಿ ಬಗ್ಗೆ ವಹಿಸಿಕೊಂಡು ಮಾತಾಡುತ್ತಿದ್ದ ಮಂಜು ಸದ್ಯ ಗೌತಮಿ ಖಡಕ್ ಮಾತಿಗೆ ಕಕ್ಕಾಬಿಕ್ಕಿಯಾಗಿದ್ದಾರೆ.
ಗೌತಮಿ ಜಾದವ್ಗೆ ಈಗ ಮಂಜು ಸ್ನೇಹ ಕಿಂಚಿತ್ತೂ ಬೇಕಾಗಿಲ್ಲ. ಹಾಗಾಗಿ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ‘ನನ್ನ ಜೊತೆ ಮಾತನಾಡಬೇಡಿ. ನನ್ನ ಹಿಂದೆ ಬರಬೇಡಿ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಪಕ್ಕ ಕೂರುವುದೇ ನನಗೆ ದೊಡ್ಡ ಸಮಸ್ಯೆ’ ಎಂದು ಗೌತಮಿ ಜಾದವ್ ಅವರು ಮಂಜಗೆ ನೇರವಾಗಿ ಹೇಳಿದ್ದಾರೆ. ಈ ರೀತಿ ಮುಖಕ್ಕೆ ಹೊಡೆದಂತೆ ಹೇಳಿದರೂ ಕೂಡ ಮಂಜು ಅರ್ಥ ಮಾಡಿಕೊಳ್ಳುತ್ತಿಲ್ಲ.
ಪ್ರತಿ ವಿಚಾರಕ್ಕೂ ಮಂಜಣ್ಣ ಮೇಲೆ ಗೌತಮಿ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕರಿಗೆ ಮೂಡಿತ್ತು. ಆದರೆ ಈಗ ಮತ್ತೆ ಗೌತಮಿ ನೀವು ನನ್ನ ಜೊತೆಗೆ ಇರಬೇಡಿ. ನೀವು ಇದ್ದರೆ ನಮಗೆ ಕಿರಿಕಿರಿ ಆಗುತ್ತೆ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಮಂಜಣ್ಣ ಅಲ್ಲಿಂದ ಎದ್ದು ಹೇಗಿದ್ದಾರೆ. ಇದಾದ ಬಳಿಕ ಮತ್ತೆ ಗೌತಮಿ ಬಳಿ ಬಂದು ಗೆಳತಿ ಅಂತ ಮಾತಾಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಆಟದ ಮೂಲಕ ತಿಳಿದುಕೊಳ್ಳಬೇಕಿದೆ.