ಸೌತ್ ನಟಿ ಕೀರ್ತಿ ಸುರೇಶ್ ಡಿ.12ರಂದು ಆ್ಯಂಟೋನಿ ಜೊತೆ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಸಂಭ್ರಮದಲ್ಲಿ ಸ್ಟಾರ್ ನಟ ದಳಪತಿ ವಿಜಯ್ ಕೂಡ ಭಾಗಿಯಾಗಿದ್ದರು. ನಟ ಭಾಗಿಯಾಗಿ ಶುಭಹಾರೈಸಿದ್ದರ ಬಗ್ಗೆ ಫೋಟೋ ಶೇರ್ ಮಾಡಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಳಪತಿ ವಿಜಯ್ ಹಾಗೂ ಕೀರ್ತಿ ಮಧ್ಯೆ ಒಳ್ಳೆಯ ಗೆಳೆತನ ಇದೆ.
ಕೀರ್ತಿ ಸುರೇಶ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ತಮ್ಮ ಬಾಲ್ಯದ ಗೆಳೆಯ ಆ್ಯಂಟೋನಿ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ದಂಪತಿಯ ಮದುವೆಗೆ ವಿಶೇಷ ವ್ಯಕ್ತಿಯೊಬ್ಬರು ಬಂದಿದ್ದರು.
ಕೀರ್ತಿ ಸುರೇಶ್ ಹಾಗೂ ಆ್ಯಂಟೋನಿ ವಿವಾಹಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದರು. ವಿವಾಹಕ್ಕೆ ಬಂದ ಅವರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
‘ನನ್ನ ಕನಸಿನ ಮದುವೆಯಲ್ಲಿ ನಮ್ಮ ಡ್ರೀಮ್ ಐಕಾನ್ ನಮ್ಮನ್ನು ಆಶೀರ್ವದಿಸಿದಾಗ’ ಎಂದು ನಟಿ ಅಡಿಬರಹ ನೀಡಿ, ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅವರ ಉಪಸ್ಥಿತಿಯನ್ನು ನಟಿ ಸಂಭ್ರಮಿಸಿದ್ದಾರೆ. ಇನ್ನೂ ವಿಜಯ್ ಮತ್ತು ಕೀರ್ತಿ ಸುರೇಶ್ ನಡುವೆ ಉತ್ತಮ ಒಡನಾಟವಿದೆ. ‘ಭೈರವ’ ಮತ್ತು ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್ಗೆ ಕೀರ್ತಿ ನಾಯಕಿಯಾಗಿ ನಟಿಸಿದರು.
ಕೀರ್ತಿ ಸುರೇಶ್ ಅವರು ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಪ್ರಕಾರ ಮದುವೆ ಆಗಿದ್ದಾರೆ. ಆ್ಯಂಟೋನಿ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ವಿವಾಹ ನಡೆದಿದೆ ಎನ್ನಲಾಗಿದೆ.ಅಂದಹಾಗೆ, ಆ್ಯಂಟೋನಿ ತಟ್ಟಿಲ್ ಮತ್ತು ಕೀರ್ತಿ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆಯಾದರು. ಕುಟುಂಬಸ್ಥರು ಮತ್ತು ನಟಿಯ ಆಪ್ತ ಕಲಾವಿದರು ಈ ಮದುವೆಯಲ್ಲಿ ಭಾಗಿಯಾದರು.