87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವುದು ಮಂಡ್ಯದ ಜನತೆಗೆ ಸಕ್ಕರೆ ತಿಂದಷ್ಟೇ ಖುಷಿಯಾಗಿದೆ. ಡಿಸೆಂಬರ್ 20, 21, 22 ಮೂರು ದಿನಗಳ ಕಾಲ ರಾಜ್ಯದ ಜನತೆಗೆ ಸಾಹಿತ್ಯದ ರಸದೌತಣ ಉಣಬಡಿಸುತ್ತಿರುವುದು ಒಂದೆಡೆಯಾದರೆ, ಮೂರು ದಿನಗಳ ಕಾಲ ಭರ್ಜರಿ ಭೋಜನ ನಾಲಿಗೆಗೆ ಮತ್ತಷ್ಟು ರುಚಿ ದೊರೆಯುತ್ತಿರುವುದು ಮತ್ತೊಂದೆಡೆ. ರಾಜ್ಯದ ವಿಶಿಷ್ಟ ಅಡುಗೆ ಭಟ್ಟರು ಬಂದು ತಮ್ಮ ಕೈರುಚಿ ತೋರಿಸುತಿದ್ದಾರೆ.
ಬರೋಬ್ಬರಿ 70 ಸಾವಿರ ಜನರಿಗೆ 140 ಕೌಂಟರ್ಗಳಲ್ಲಿ ತಿಂಡಿ, ಊಟ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ 40 ಕೌಂಟರ್ಗಳಲ್ಲಿ ನೊಂದಾಯಿತ ಪ್ರತಿನಿಧಿಗಳಿಗೆ ಮೀಸಲಿದ್ದರೆ, ಉಳಿದ 100 ಕೌಂಟರ್ಗಳಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.
ಈ ಎಲ್ಲಾ ಭೋಜನದ ಜವಾಬ್ದಾರಿಯನ್ನು ಮಂಡ್ಯದ ಅಪೂರ್ವ ವೆಜ್ ಹೋಟೆಲ್ ವಹಿಸಿಕೊಂಡಿದೆ. ಹಾಗಾದರೆ, ಮೂರು ದಿನಗಳ ಭೋಜನದಲ್ಲಿ ಏನೇನು ಸ್ಪೆಷಲ್? ಹೇಗಿದೆ ಮೆನು? ಇಲ್ಲಿದೆ ನೋಡಿ.
ಮೊದಲ ದಿನ- ಡಿಸೆಂಬರ್ 20 (ಶುಕ್ರವಾರ)
ಬೆಳಗಿನ ಉಪಾಹಾರ- ಇಡ್ಲಿ, ತಟ್ಟೆ ಇಡ್ಲಿ, ವಡೆ, ಚಟ್ನಿ, ಖಾರ ಬಾತ್, ಸಾಂಬಾರ್, ಉಪ್ಮ, ಮೈಸೂರು ಪಾಕ್, ಕಾಫಿ, ಟೀ.
ಮಧ್ಯಾಹ್ನದ ಊಟ- ಕಾಯಿ ಹೋಳಿಗೆ, ಜೋಳದ ರೊಟ್ಟಿ, ಬದನೆಕಾಯಿ ಎಣ್ಗಾಯಿ, ಅನ್ನ, ಮೆಂತ್ಯ ಬಾತ್, ಕೋಸಂಬರಿ, ಹಪ್ಪಳ, ಸಲಾಡ್, ಚಟ್ನಿ ಪುಡಿ, ಮೊಳಕೆ ಸಾರು, ಸಾಂಬಾರ್, ಉಪ್ಪು, ಉಪ್ಪಿನಕಾಯಿ, ಮೊಸರು, ಬಾಳೆಹಣ್ಣು,
ರಾತ್ರಿ ಊಟ- ಪೂರಿ, ಸಾಗು, ಹಾರ್ಲಿಕ್ಸ್ ಬರ್ಫಿ, ಅವರೆಕಾಳು ಬಾತ್, ರಾಯಿತ, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್, ಉಪ್ಪಿನಕಾಯಿ ಅಪ್ಪಳ.
ಎರಡನೇ ದಿನ- ಡಿಸೆಂಬರ್ 21 (ಶನಿವಾರ)
ಬೆಳಗ್ಗೆ ತಿಂಡಿ – ರಾಗಿದೋಸೆ, ಸಿಹಿಪೊಂಗಲ್, ಖಾರಾ ಪೊಂಗಲ್.
ಮಧ್ಯಾಹ್ನ ಊಟ – ಅಕ್ಕಿರೊಟ್ಟಿ, ಮಿಶ್ರ ತರಕಾರಿ ಪಲ್ಯ, ವೆಜ್ ಪಲಾವ್, ರಾಯತ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಹಪ್ಪಳ, ಸಲಾಡ್.
ರಾತ್ರಿ ಊಟ – ಚಪಾತಿ, ಸಾಗು, ಗೀರೈಸ್, ಕುರ್ಮಾ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್.
ಮೂರನೇ ದಿನ- ಡಿಸೆಂಬರ್ 22 (ಭಾನುವಾರ)
ಬೆಳಗ್ಗೆ ತಿಂಡಿ – ಟೊಮ್ಯಾಟೋ, ಬಾತ್ ದೋಸೆ ಚಟ್ನಿ, ಕ್ಯಾರೆಟ್ ಹಲ್ವಾ.
ಮಧ್ಯಾಹ್ನ ಊಟ – ಬಿಳಿ ಹೋಳಿಗೆ, ಪಪ್ಪು, ಜಿರ ರೈಸ್ ಸಾಗೂ, ಬಾದೂಷ, ಮುದ್ದೆ, ಅನ್ನ, ಸೊಪ್ಪಿನ ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್.
ರಾತ್ರಿ – ಮೆಂತ್ಯೆ ಬಾತ್, ರಾಯಿತ, ಕೊಬ್ಬರಿ ಮಿಠಾಯಿ, ಅನ್ನ, ರಸಂ, ಮೊಸರು, ಬಾಳೆಹಣ್ಣು, ಕೋಸಂಬರಿ, ಪಲ್ಯ, ಹಪ್ಪಳ, ಸಲಾಡ್.