ಕೆಲ ತಿಂಗಳಿಂದ ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ರೂಮರ್ಸ್ ಹರಿದಾಡುತ್ತಲೇ ಇದೆ. ಶೀಘ್ರದಲ್ಲೇ ಇಬ್ಬರೂ ವಿಚ್ಛೇದನ ಪಡೆದು ದೂರವಾಗ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು. ಇದೀಗ ಬಿಗ್ ಬಿ ಮಗ-ಸೊಸೆ ರೂಮರ್ಸ್ಗಳಿಗೆಲ್ಲಾ ಬ್ರೇಕ್ ಹಾಕಿದ್ದಾರೆ. ಫ್ಯಾಮಿಲಿ ಜೊತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್, ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ಒಟ್ಟಾಗಿ ಒಂದೇ ಕಾರಿನಲ್ಲಿ ಆಗಮಿಸಿದ್ರು. ಆರಾಧ್ಯ ಬಚ್ಚನ್ ಶಾಲಾ ಕಾರ್ಯಕ್ರಮಕ್ಕೆಂದು ಮೂವರು ಆಗಮಿಸಿದ್ರು. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಆರಾಧ್ಯ ಬಚ್ಚನ್ ಓದ್ತಿದ್ದಾರೆ.
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ಗುರುವಾರ ಆನುವಲ್ ಡೇ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದೆ ಬಿಗ್ ಬಿ ಅಮಿತಾಬ್, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಂದಿದ್ರು. ಈವೆಂಟ್ ಗೆ ಬಾಲಿವುಡ್ ನ ದೊಡ್ಡ ಸ್ಟಾರ್ಗಳು ಕೂಡ ಆಗಮಿಸಿದ್ರು. ಶಾರುಖ್ ಖಾನ್ ಮತ್ತು ಗೌರಿ ಖಾನ್, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್, ಕರಣ್ ಜೋಹರ್ ಮತ್ತು ಶಾಹಿದ್ ಕಪೂರ್ ಅವರು ಮೀರಾ ರಜಪೂತ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ರು.
ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಎಲ್ಲವೂ ಸರಿ ಇದೆ ಎಂದು ಕುಟುಂಬದವರು ಹೇಳುತ್ತಲೇ ಬರುತ್ತಿದ್ದರು. ಆದರೆ, ಆ ರೀತಿ ಇಲ್ಲ ಎಂಬ ವಿಚಾರ ಪದೇ ಪದೇ ಸ್ಪಷ್ಟವಾಗಿತ್ತು. ಆದರೆ, ಈಗ ಎಲ್ಲದಕ್ಕೂ ಫುಲ್ಸ್ಟಾಪ್ ಬಿದ್ದಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂಬುದು ಸಾಬೀತಾಗಿದೆ.
ಇನ್ನು ಇಬ್ಬರೂ ಸುಂದರವಾಗಿ ಕಾಣಿಸುತ್ತಿದ್ದರು. ಈ ವೇಳೆ ಐಶ್ವರ್ಯಾ ಅವರನ್ನು ಅಭಿಷೇಕ್ ಕೇರ್ ಮಾಡುತ್ತಿದ್ದರು. ಇದು ಅನೇಕರಿಗೆ ಇಷ್ಟ ಆಗಿದೆ. ಇಬ್ಬರೂ ನಗುತ್ತಾ ಸಾಗುತ್ತಿರುವ ವಿಡಿಯೋನ ಪಾಪರಾಜಿಗಳು ಸೆರೆಹಿಡಿದಿದ್ದಾರೆ.
‘ಅಭಿಷೇಕ್ ಎಷ್ಟು ಪ್ರೀತಿ ಮಾಡುತ್ತಾರೆ ನೋಡಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ನಿಮ್ಮಿಬ್ಬರನ್ನು ಒಟ್ಟಾಗಿ ನೋಡಲು ಎಷ್ಟು ಖುಷಿ ಆಗುತ್ತಿದೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಅಂಬಾನಿ ಮನೆ ಮದುವೆಯಲ್ಲಿ ಇಬ್ಬರೂ ಬೇರೆ ಬೇರೆ ಬಂದಿದ್ದಕ್ಕೆ ವಿಚ್ಛೇದನ ವದಂತಿ ಹುಟ್ಟಿತ್ತು. ಈಗ ಅಂಬಾನಿ ಒಡೆತನದ ಶಾಲೆಗೆ ಒಟ್ಟಾಗಿ ಬರುವ ಮೂಲಕ ಈ ವದಂತಿಗಳಿಗೆ ಅವರು ಬ್ರೇಕ್ ಹಾಕಿದ್ದಾರೆ ಅನ್ನೋದು ವಿಶೇಷ.