ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ರಿಷಬ್ ಅವರಿಗೆ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ.
ಕಾಂತಾರ ಪ್ರೀಕ್ವೆಲ್ ನಲ್ಲಿ ಬ್ಯುಸಿ ಆಗಿರೋ ನಟ ನಿರ್ದೇಶಕ ರಿಷಬ್ ಶೆಟ್ಟಿ, ಸದ್ಯ ಒಂದಲ್ಲ ಎರಡೆರಡು ಪ್ಯಾನ್ ಇಂಡಿಯಾ ಚಿತ್ರಗಳನ್ನ ಅನೌನ್ಸ್ ಮಾಡಿದ್ದಾರೆ. ತೆಲುಗಿನಲ್ಲಿ ಜೈ ಹನುಮಾನ್ ಹಾಗೂ ಹಿಂದಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರಗಳನ್ನ ರಿಷಬ್ ಶೆಟ್ಟಿ ಘೋಷಿಸಿದ್ದು, ಇದೀಗ ಮತ್ತೊಂದು ಮೆಗಾ ಸಿನಿಮಾದ ಹಿಂಟ್ ಬಿಟ್ಟುಕೊಟ್ಟಿದ್ದಾರೆ.
ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಣಾ ದಗ್ಗುಬಾಟಿ ನಡೆಸಿಕೊಡೋ ನೂತನ ಶೋನಲ್ಲಿ ಈ ಮ್ಯಾಟರ್ ನ ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ಅಂದಹಾಗೆ ಕೆರಾಡಿಯಲ್ಲೇ ಶೂಟಿಂಗ್ ಸೆಟ್ ಹಾಕಿ ಸಿನಿಮಾ ಚಿತ್ರಿಸುತ್ತಿರೋ ಶೆಟ್ರು, ಮಗನ ಸ್ಕೂಲಿಂಗ್ ಸಮೇತ ಕಂಪ್ಲೀಟ್ ಫ್ಯಾಮಿಲಿಯನ್ನ ಕುಂದಾಪುರಕ್ಕೆ ಶಿಫ್ಟ್ ಮಾಡಿದ್ದಾರೆ. ತಾನು ಓದಿದ ಕೆರಾಡಿ ಸರ್ಕಾರಿ ಶಾಲೆಯಲ್ಲೇ ಮಗನನ್ನ ಕೂಡ ಓದಿಸುತ್ತಿದ್ದಾರೆ. ಇನ್ನು ರಿಷಬ್ ಗಾಗಿ ಸ್ವತಃ ರಾಣಾ ಅವರೇ ಕೆರಾಡಿಗೆ ಬಂದು ಅದೇ ಶಾಲೆಯಲ್ಲಿ ಅವ್ರನ್ನ ಸಂದರ್ಶನ ಮಾಡಿದ್ದಾರೆ.