2024 ವರ್ಷಕ್ಕೆ ಗುಡ್ ಬೈ ಹೇಳೋಕೆ ದಿನ ಗಣನೆ ಪ್ರಾರಂಭವಾಗಿದೆ. ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಸಜ್ಜಾಗ್ತಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ BBMP ಹೊಸ ವರ್ಷದ ಗೈಡ್ ಲೈನ್ಸ್ ರಿಲೀಸ್ ಮಾಡಿದೆ.
ನ್ಯೂಇಯರ್ ಸೆಲೆಬ್ರೇಷನ್ಗೆ ಹೊಸ ರೂಲ್ಸ್
ಹೊಸ ವರ್ಷಾಚರಣೆ ಜೋಶ್ಗೆ ಕೆಲ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ. ನ್ಯೂಇಯರ್ ಭರ್ಜರಿ ಸೆಲೆಬ್ರೇಷನ್ಗೆ ಇಡೀ ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯ್ತಿದೆ. ಸದ್ಯ ಬೆಂಗಳೂರು ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದು, ನ್ಯೂ ಇಯರ್ ಗೈಡ್ಲೈನ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರೋ ಪಾಲಿಕೆ ಈ ಬಾರಿಯೂ ನ್ಯೂ ಇಯರ್ಗೆ ಕೆಲ ರೂಲ್ಸ್ ಜಾರಿ ತರಲು ಸಜ್ಜಾಗಿದೆ
ರಾಜಧಾನಿಯಲ್ಲಿ ಹೊಸ ವರ್ಷಕ್ಕೆ ಏನೆಲ್ಲಾ ರೂಲ್ಸ್ ಜಾರಿಗೆ ಮುಂದಾಗಿದೆ ಅನ್ನೋದನ್ನ ನೋಡೋದಾದರೆ,
ರಾತ್ರಿ 1 ಗಂಟೆಯೊಳಗೆ ಸೆಲೆಬ್ರೇಷನ್ ಮುಗಿಯಬೇಕು
ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈಓವರ್ ಬಂದ್
MG ರಸ್ತೆ, ಬ್ರಿಗೇಡ್ ರಸ್ತೆ ಯಲ್ಲಿ ವಾಹನ ಸಂಚಾರ ಬಂದ್
ರಾತ್ರಿ 8 ಗಂಟೆಯ ಬಳಿಕ ವಾಹನಗಳ ಸಂಚಾರ ಬಂದ್
ಬ್ರಿಗೇಡ್ ರಸ್ತೆ ಸೇರಿ 800ಕ್ಕೂ ಹೆಚ್ಚು CCTV ಅಳವಡಿಕೆ
ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ
ಬಾರ್, ಪಬ್ಗಳಿಗೂ ರಾತ್ರಿ 1 ಗಂಟೆವರೆಗೆ ಅವಕಾಶ
ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
ಲೌಡ್ ಸ್ಪೀಕರ್ ಹಾಗೂ ಪಟಾಕಿ ಸಿಡಿಸಲು ನಿರ್ಬಂಧ