ರಷ್ಯಾದ ಕಝಾನ್ ನಗರದ ವಸತಿ ಕಟ್ಟಡದ ಮೇಲೆ ದಾಳಿ ನಡೆದಿದೆ. ಅನಾಮಿಕ ವೈಮಾನಿಕ ವಾಹನಗಳಿಂದ ಈ ಒಂದು ದಾಳಿ ನಡೆದಿದ್ದು 2001ರಲ್ಲಿ ಬಿನ್ ಲಾಡೆನ್ ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ ಮೇಲೆ ನಡೆಸಿದ ಮಾದರಿಯಲ್ಲಿಯೇ ಈ ಒಂದು ದಾಳಿ ನಡೆದಿದೆ. ಕಝಾನ್ ನಗರದ ಐಷಾರಾಮಿ ವಸತಿ ಕಟ್ಟಡದ ಮೇಲೆ ಈ ಒಂದು ದಾಳಿ ನಡೆದಿದ್ದು. ದಾಳಿಯಿಂದಾಗಿ ಕಟ್ಟಡದ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಒಂದು ದಾಳಿಯನ್ನು ಉಕ್ರೇನ್ ನಡೆಸಿರುವ ಸಾಧ್ಯತೆ ಇದೆ ಎಂದು ರಷ್ಯಾ ಹೇಳಿದೆ.
ಈ ಒಂದು ದಾಳಿಯನ್ನು ಕಣ್ಣಾರೆ ಕಂಡವರು ವಿಡಿಯೋ ಮಾಡಿಕೊಂಡಿದ್ದಾರೆ. ಕಟ್ಟಡದ ಮೇಲೆ ದಾಳಿ ನಡೆದದ್ದು ಹಾಗೂ ಆನಂತರ ಆದ ಭಯಾನಕ ಪರಿಣಾಮಗಳು ಆ ವಿಡಿಯೋದಲ್ಲಿ ಕಂಡು ಬಂದಿವೆ. ಕಟ್ಟಡದ ಮೇಲೆ ನಡೆದ ಡ್ರೋನ್ ದಾಳಿ ಕಝಾನ್ ಏರ್ಪೋರ್ಟ್ನ ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಎಲ್ಲಾ ಕೈಗಾರಿಕೆಗಳ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ಹೇಳುತ್ತದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಉಕ್ರೇನ್ನ ಡ್ರೋನ್ ದಾಳಿಯು ಟಾಟರ್ಸ್ತಾನ್ ಪ್ರಾಂತ್ಯದ ರಾಜಧಾನಿಯಲ್ಲಿ 3 ಕಟ್ಟಡಗಳನ್ನು ಹಾನಿಗೊಳಿಸಿದೆ. ಈ ದಾಳಿಯ ನಂತರ, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ. ಶುಕ್ರವಾರ ಮುಂಜಾನೆ, ರಷ್ಯಾ ಉಕ್ರೇನ್ನ ರಾಜಧಾನಿ ಕೀವ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ಮಾಡಿತ್ತು, ಒಬ್ಬ ವ್ಯಕ್ತಿಯನ್ನು ಕೊಂದು ಒಂಬತ್ತು ಮಂದಿ ಗಾಯಗೊಂಡಿದ್ದರು. ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಉಕ್ರೇನ್ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಷ್ಯಾ ಹೇಳಿದೆ.
ಕೀವ್ನಲ್ಲಿ ಸೂರ್ಯೋದಯಕ್ಕೆ ಮುಂಚೆಯೇ ಕನಿಷ್ಠ ಮೂರು ಸ್ಫೋಟಗಳು ಕೇಳಿಬಂದವು. ಕ್ಷಿಪಣಿ ದಾಳಿಯು ಮೂರು ಜಿಲ್ಲೆಗಳಲ್ಲಿ ಹಾನಿ ಮತ್ತು ಬೆಂಕಿಯನ್ನು ಉಂಟುಮಾಡಿತು. ನಗರ ಪಾಲಿಕೆ ಈ ಮಾಹಿತಿ ನೀಡಿದೆ. ದಾಳಿಯಲ್ಲಿ 630 ವಸತಿ ಕಟ್ಟಡಗಳು, 16 ವೈದ್ಯಕೀಯ ಕೇಂದ್ರಗಳು ಮತ್ತು 30 ಶಾಲೆಗಳಿಗೆ ಹಾನಿಯಾಗಿದೆ ಎಂದು ಆಡಳಿತ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ರಷ್ಯಾದ ರಕ್ಷಣಾ ಸಚಿವ ಉಕ್ರೇನ್ನಿಂದ ಹಾರಿಸಲ್ಪಟ್ಟ ಅನಾಮಿಕ ವೈಮಾನಿಕ ವಾಹನದಿಂದಾಗಿ ಈ ಒಂದು ದುರ್ಘಟನೆ ನಡೆದಿದೆ. ಉಕ್ರೇನ್ಗೆ ಈಗಾಗಲೇ ನ್ಯಾಟೊ ಪಡೆಯನ್ನು ಸೇರದಿರುವಂತೆ ಪುಟಿನ್ ಸರ್ಕಾರ ಬೇಡಿಕೆಯಿಟ್ಟದೆ ಆದ್ರೆ ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಈ ಬೇಡಿಕೆಯನ್ನು ತಿರಸ್ಕರಿಸಿವೆ. ಈ ದಾಳಿಯ ಹಿಂದೆ ಉಕ್ರೇನ್ ಇರುವುದು ಖಚಿತ ಎಂದು ಹೇಳಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ನ ನಡುವೆ ಈ ಒಂದು ಕದನ ಆರಂಭವಾಗಿ ಬರುವ ಫೆಬ್ರವರಿಗೆ 3 ವರ್ಷಗಳ ತುಂಬುತ್ತವೆ, ಈ ಮೂರು ವರ್ಷದ ಅವಧಿಯಲ್ಲಿ ರಷ್ಯಾದ ಗಡಿಯೊಳಗೆ ಸಾಕಷ್ಟು ಉಕ್ರೇನ್ನ ಡ್ರೋನ್ಗಳು ಹಾರಾಟ ನಡೆಸಿವೆ. ಆದ್ರೆ ಈ ಬಾರಿ ಗಡಿದಾಟಿ ಬಂದ ಡ್ರೋನ್ಗಳು ತಮ್ಮ ಗುರಿಮುಟ್ಟುವಲ್ಲಿ ಯಶಸ್ವಿಯಾಗಿವೆ. ಒಂದು ಡ್ರೋನ್ನನ್ನು ಹೊಡೆದುರುಳಿಸುವಲ್ಲಿ ನಮ್ಮ ಸೇನಾ ಪಡೆ ಯಶಸ್ವಿಯಾಗಿದೆ ಎಂದು ರಷ್ಯಾದ ಡಿಫೆನ್ಸ್ ಮಿನಿಸ್ಟರ್ ಆ್ಯಂಡ್ರೆ ಬೆಲೌಸೊವ್ ಹೇಳಿದ್ದಾರೆ.