‘ಬಿಗ್ ಬಾಸ್’ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಈ ವಾರ ಅವರು ಟಾಸ್ಕ್ನ ಉಸ್ತುವಾರಿ ಸರಿಯಾಗಿ ಮಾಡಿರಲಿಲ್ಲ ಎಂಬುದೇ ಪ್ರಮುಖ ಕಾರಣ. ಇದರ ಬೆನ್ನಲ್ಲೇ ಸುದೀಪ್ ಅವರು ಚೈತ್ರಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಉಳಿದ ಸ್ಪರ್ಧಿಗಳು ನಮ್ಮ ಕುಗ್ಗಿಸುತ್ತಿದ್ದಾರೆ’ ಎಂದು ಚೈತ್ರಾ ಹೇಳಿದ್ದಾರೆ. ಇದಕ್ಕೆ ಸುದೀಪ್ ಫುಲ್ ಗರಂ ಆಗಿ ಮಾತನಾಡಿದ್ದಾರೆ. ‘ನೀವು ಅವರ ಹೆಸರು ತೆಗೆದುಕೊಂಡಾಗ ಅವರು ಕುಗ್ಗಲ್ವಾ? ಬಾಣ ಕೊಡೋಕೆ ನೀವು ರೆಡಿ ಇದ್ದೀರಿ, ಆದರೆ, ತಗಳೋಕೆ ರೆಡಿ ಇಲ್ಲ ಎಂದರೆ ನೀವು ಆಟಕ್ಕೆ ಫಿಟ್ ಆಗಲ್ಲ’ ಎಂದು ಸುದೀಪ್ ಹೇಳಿದ್ದಾರೆ. ಅದರ ಪ್ರೋಮೋ ಇಲ್ಲಿದೆ ನೋಡಿ..!
Continue Reading