ಸಿಟಿ ರವಿ ಪರ ವಿಪಕ್ಷ ನಾಯಕ ಆರ್ ಅಶೋಕ್ ಬ್ಯಾಟಿಂಗ್ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಟಿ ರವಿ ಕೇಸ್ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ ಶುರುವಾಗಿದೆ. ಆಂಧ್ರ ರಾಜಕೀಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗೋ ಸ್ಥಿತಿ ನಿರ್ಮಾಣ ಆಗಿದೆ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಔಟ್ ಗೋಯಿಂಗ್ ಸಿಎಂ ಅವರು ನಮಗೇನು ಆಗಬೇಕು ಅಂತ ಸೈಲೆಂಟ್ ಆಗಿದ್ದಾರೆ. ಡಿ.ಕೆ ಶಿವಕುಮಾರ್ ವಿಪಕ್ಷಗಳನ್ನ ಬಡಿದು ಸಿಎಂ ಆಗೋಣ ಹಾಗೂ ಹೈಕಮಾಂಡ್ ಮುಂದೆ ಶಕ್ತಿ ತೋರಿಸೋಕೆ ಹೀಗೆಲ್ಲ ಮಾಡ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸರು ನಡೆದುಕೊಂಡಿರೋ ವರ್ತನೆಯನ್ನ ಸಹಿಸಲು ಸಾಧ್ಯವಿಲ್ಲ. ಯಾರದ್ದೋ ಸೂಚನೆ ಮೇಲೆ ಸಿಟಿ ರವಿಯನ್ನ ಪೊಲೀಸರು ಹೀಗೆ ನಡೆಸಿಕೊಂಡಿದ್ದಾರೆ. ಅವರು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕೇಸನ್ನ ಸಿಬಿಐಗೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು.