ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಮುದ್ದಾದ ಫ್ಯಾಮಿಲಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಶೆಟ್ರು ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ಜಾಲಿ ಮೂಡಲ್ಲಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಕಾಂತಾರ ಸಿನಿಮಾ ಮೂಲಕ ಡಿವೈನ್ ಸ್ಟಾರ್ ಎಂದು ಜನಪ್ರಿಯತೆ ಪಡೆದಿರುವ ಚಂದನವನದ ನಟ ರಿಷಬ್ ಶೆಟ್ಟಿ ಸದ್ಯದ ಬ್ಯುಸಿಯೆಸ್ಟ್ ನಟ. ಯಾಕಂದ್ರೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳನ್ನ ರಿಷಬ್ ಶೆಟ್ಟಿ ಒಪ್ಪಿಕೊಂಡಿದ್ದಾರೆ.
ಸದ್ಯಕ್ಕಂತೂ ಶೆಟ್ರು ಕಾಂತಾರ ಚಾಪ್ಟರ್ 1ರ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಿಷಬ್ ಹುಟ್ಟೂರಾದ ಕೆರಾಡಿಯಲ್ಲಿ ಕಾಂತಾರದ ಮುಂದುವರೆದ ಭಾಗದ ಶೂಟಿಂಗ್ ನಡೆಯುತ್ತಿದ್ದು, ಅದರಲ್ಲೇ ಮುಳುಗಿ ಹೋಗಿದ್ದರೂ ಕೂಡ ಇತರ ಖಾಸಗಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಶೆಟ್ರು ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ನೀಡಿ ಹೆಂಡ್ತಿ ಮಕ್ಕಳ ಜೊತೆ ಜಾಲಿ ಮೂಡಲಿರುವುದು ಕಂಡುಬಂದಿದೆ.
ರಿಷಬ್ ಶೆಟ್ಟಿ ಸದ್ಯ ಕಾಂತಾರಾ ಚಾಪ್ಟರ್ 1 ಶೂಟಿಂಗ್ ನಡೆಸುತ್ತಿದ್ದಾರೆ. ಇದಾದ ನಂತರ ತೆಲುಗಿನ ಹನುಮಾನ್ ಸಿನಿಮಾದಲ್ಲಿ ಹನುಮಂತನಾಗಿ ಅಬ್ಬರಿಸಲಿದ್ದಾರೆ. ಅಲ್ಲದೇ ಹಿಂದಿ ಸಿನಿಮಾದಲ್ಲೂ ನಟಿಸುತ್ತಿದ್ದು, ದ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.