ಆ್ಯಕ್ಟರ್ ಡಾಕ್ಟರ್ ಮದುವೆ, ಬಂದು ಆಶಿರ್ವಧಿಸಿ ಎಂಬ ಬರಹ ಹೊಂದಿರುವ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಆಮಂತ್ರಣ ಪತ್ರಿಕೆ ರಾಜ್ಯದೆಲ್ಲೆಡೆ ಸಖತ್ ವೈರಲ್ ಆಗಿತ್ತು. ಇದೀಗ ಡಾಲಿ ಧನಂಜಯ ಅವರು ತಮ್ಮ ಮದುವೆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ಹಲವಾರು ಗಣ್ಯರನ್ನ ಆಹ್ವಾನಿಸುತ್ತಿದ್ದಾರೆ. ಡಾಲಿ ಧನ್ಯ ಫೆಬ್ರವರಿಯಲ್ಲಿ ವಿವಾಹವಾಗುತ್ತಿದ್ದು, ನಾಡಿನ ಗಣ್ಯರನ್ನ ಭೆಟಿಯಾಗಿ ಆಮಂತ್ರಣ ನಿಡುತ್ತಿದ್ದಾರೆ.
ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಡಾಲಿ ಹಾಗೂ ಧನ್ಯತಾ ತಮ್ಮ ವಿವಾಹ ಆಹ್ವಾನ ಪತ್ರಿಕೆ ನೀಡಿ, ಆಶಿರ್ವಾದ ಪಡೆದಿದ್ದಾರೆ. ಕೆಲ ಮಠಗಳಿಗೆ ಭಕ್ತರಾಗಿರುವ ಡಾಲಿ ಧನಂಜಯ, ಸ್ವಾಮೀಜಿಗಳ ಜೊತೆ ಗುರು-ಶಿಷ್ಯ ಬಾಂಧವ್ಯ ಹೊಂದಿರುವುದು ವಿಶೇಷ.
ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಿ, ಆಹ್ವಾನಿಸಿದ್ದಾರೆ ಡಾಲಿ ಧನಂಜಯ್. ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಆಮಂತ್ರಣ ಪತ್ರಿಕೆಯನ್ನು ಡಾಲಿ ನೀಡಿದ್ದು, ಈ ವೇಳೆ ಡಿಕೆ ಶಿವಕುಮಾರ್ ಅವರ ಪತ್ನಿಯೂ ಜೊತೆಗಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿಕೆ ಸುರೇಶ್ ಅವರಿಗೂ ಸಹ ಡಾಲಿ ಧನಂಜಯ ತಮ್ಮ ವಿವಾಹ ಆಹ್ವಾನ ಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ತಮ್ಮ ಮದುವೆಗೆ ಬಂದು ಆಶೀರ್ವದಿಸುವಂತೆ ಆಹ್ವಾನಿಸಿದ್ದರು.