ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಶನಿವಾರದ ಎಪಿಸೋಡ್ ನಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಮನೆ ಮಂದಿಗೆ ಕ್ಲಾಸ್ ತಗೊಂಡಿದ್ದಾರೆ. ಕೆಲವರ ಮಾತು, ನಡೆಯನ್ನು ಟೀಕಿಸಿದ್ದಾರೆ. ಹನುಮಂತನಿಗೆ ಬಹಳ ಕಟು ಪದಗಳಲ್ಲಿ ಟೀಕಿಸಿದ್ದಾರೆ. ವಿಶೇಷವಾಗಿ ಚೈತ್ರಾ ಕುಂದಾಪುರ, ಹನುಮಂತು ಮತ್ತು ಈ ವಾರದ ಉತ್ತಮ ಎನಿಸಿಕೊಂಡಿರುವ ತ್ರಿವಿಕ್ರಮ್ ಗೆ ಸಹ ಕಿಚ್ಚ ಸಖತ್ ಕ್ಲಾಸ್ ತಗೊಂಡಿದ್ದಾರೆ. ತ್ರಿವಿಕ್ರಮ್ಗಂತೂ ನೀವು ಯಾಕೋ ತ್ಯಾಗರಾಜ ಆಗುತ್ತಿದ್ದೀರಿ ಎಂದ ಸುದೀಪ್ ಪರೋಕ್ಷವಾಗಿ ಮನೆಯಿಂದ ಹೊರಗೋಗಬೇಕಾಗುತ್ತದೆ ಎಂಬ ಸುಳಿವು ನೀಡಿದ್ದಾರೆ.
ತ್ರಿವಿಕ್ರಮ್ ಕಳೆದ ವಾರ ಚೆನ್ನಾಗಿಯೇ ಆಟ ಆಡಿದ್ದರು. ಆದರೆ ತಮ್ಮ ತಂಡದ ಇತರರು ಬಹಳ ಚೆನ್ನಾಗಿ ಆಡಿದ್ದಾರೆ ಎಂದು ಸ್ವತಃ ಅವರನ್ನೆ ನಾಮಿನೇಟ್ ಮಾಡಿಕೊಂಡರು. ಆದರೆ ಇದನ್ನು ಬಿಗ್ಬಾಸ್ ಒಪ್ಪಲಿಲ್ಲ. ಕೊನೆಗೆ ಮನೆಯ ಬೇರೆ ಸದಸ್ಯರ ಬಳಿ ತಮ್ಮನ್ನೇ ನಾಮಿನೇಟ್ ಮಾಡಿ ಎಂದು ಕೇಳಿಕೊಂಡರು. ಕೊನೆಗೆ ಎಲ್ಲರೂ ತ್ರಿವಿಕ್ರಮ್ ಹೆಸರು ತೆಗೆದುಕೊಂಡ ಕಾರಣ ಅವರು ನಾಮಿನೇಟ್ ಆದರು.
ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ‘ನೀವು ತ್ಯಾಗರಾಜ ರೀತಿ ಕಾಣ್ತಾ ಇದೀರಾ’ ಎಂದ ಸುದೀಪ್, ನಿಮಗಾಗಿ ನೀವು ಆಡಿ ಎಂದರು. ಇಂಥಹಾ ‘ತ್ಯಾಗಗಳು’ ನೋಡಲು ಚೆನ್ನಾಗಿ ಕಾಣಲ್ಲ. ಹೀರೋ ಆಗುವ ಭ್ರಮೆಯಲ್ಲಿ ಮಾಡುವ ಇಂಥಹಾ ತ್ಯಾಗಗಳು ನಿಮ್ಮನ್ನು ವೀಕ್ ಆಗಿರುವಂತೆ ತೋರಿಸುತ್ತವೆ ಎಂದರು. ಅಲ್ಲದೆ ಇದೇ ಕಾರಣಕ್ಕೆ ನೀವು ಹೊರಗೆ ಹೋಗುವ ಸಾಧ್ಯತೆಯೂ ಇದೆ ಎಂದು ಪರೋಕ್ಷವಾಗಿ ಹೇಳಿದರು.
ಇನ್ನು ಚೈತ್ರಾ ಕುಂದಾಪುರ ಅವರಿಗಂತೂ ಕಿಚ್ಚ ಸುದೀಪ್ ಖಡಕ್ ಆಗಿ ಮಾತನಾಡಿದರು. ಚೈತ್ರಾ ಕುಂದಾಪುರ ಕಳೆದ ವಾರ ಟಾಸ್ಕ್ ಗೆ ಉಸ್ತುವಾರಿ ಆಗಿದ್ದರು. ಆ ಟಾಸ್ಕ್ ಅನ್ನು ತುಂಬಾ ಕೆಟ್ಟದಾಗಿ ನಡೆಸಿಕೊಟ್ಟರು. ತಾವು ಹೇಳಿದ್ದೆ ಆಗಬೇಕು ಎನ್ನುವ ಉಮೇದಿನಲ್ಲಿ ತಪ್ಪು ನಿರ್ಣಯಗಳು, ಪೂರ್ವಾಗ್ರಹಪೀಡಿತ ನಿರ್ಣಯಗಳನ್ನು ತೆಗೆದಿಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಇದರಿಂದ ಆಟವೇ ರದ್ದಾಗಿ ಹೋಯ್ತು. ಈ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ‘ನಿಮ್ಮ ಉಸ್ತುವಾರಿ ಹೇಸಿಗೆ ಅನಿಸಿತು’ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದರು.
ಇಂದು ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಷನ್ ಇದ್ದು, ತ್ರಿವಿಕ್ರಮ್ ಅಥವಾ ಚೈತ್ರಾ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಅವರೇ ಮನೆಯಿಂದ ಹೊರಗೆ ಹೋಗಬೇಕು ಎಂಬುದು ಮನೆ ಮಂದಿಯ ಅಭಿಪ್ರಾಯವಾಗಿದೆ.