ಮೆಲ್ಬರ್ನೊದಲ್ಲಿ ನಡೆಯಬೇಕಿರುವ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ನಾಯಕ ರೋಹಿತ್ ಶರ್ಮಾ ನೆಟ್ ಪ್ರ್ಯಾಕ್ಟಿಸ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ , ಇದರಿಂದ ನಾಲ್ಕನೇ ಟೆಸ್ಟ್ ಪಂದ್ಯ ಆಡ್ತಾರ ಇಲ್ವಾ ಅನ್ನೋ ಅನುಮಾನ ಕಾಡುತ್ತಿದೆ. ಸದ್ಯ ಈ ನೋವಿನಲ್ಲೂ ಆಡುವ ಹುಮ್ಮಸ್ಸು ತೋರಿಸುತ್ತಿರುವ ರೋಹಿತ್ ಶರ್ಮಾ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಪಡೆಯುತ್ತಿದ್ದಾರೆ.
ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಚೇರ್ ಮೇಲೆ ಕುಳಿತಿರುವ ರೋಹಿತ್ ಶರ್ಮಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೋಡೋದಕ್ಕೆ ಅಷ್ಟೊಂದು ದೊಡ್ಡ ಗಾಯವಾಗಿಲ್ಲ. ಆದರೂ ಕೂಡ ನಾಳೆಯಿಂದ ಶುರುವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ಗೆ ರೋಹಿತ್ ಆಡ್ತಾರ ಇಲ್ಲವಾ ಅನ್ನೋ ಅನುಮಾನವಂತೂ ಇನ್ನೂ ಬಗೆಹರಿದಿಲ್ಲ.
ಸದ್ಯದ ಮಾಹಿತಿಯ ಪ್ರಕಾರ ಟೀಂ ಇಂಡಿಯಾ ಎಲ್ಲಾ ಆಟಗಾರರು ನೆಟ್ ಸೆಷನ್ನಲ್ಲಿ ಪ್ರಾಕ್ಟಿಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಬೂಮ್ರಾ, ಸಿರಾಜ್ ಅದ್ಬುತವಾಗಿ ಬೌಲಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಸದ್ಯ ಫಾರ್ಮ್ ನಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಸಹ ಸ್ಪಿನ್ ಬೌಲರ್ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ನಲ್ಲಿಸಖತ್ ಆಗಿ ಬ್ಯಾಟ್ ಬೀಸುತ್ತಿದ್ದಾರೆ.