ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ನಲ್ಲಿ ಸೀಟ್ ಸಿಗುವುದೇ ಕಷ್ಟ, ಅಷ್ಟರ ಮಟ್ಟಿಗೆ ಜನ ದಟ್ಟನೆ ಇರುತ್ತದೆ. ಶಕ್ತಿ ಯೋಜನೆ ಎಫೆಕ್ಟ್ನಿಂದ ಬಸ್ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆಗೆ ಕಳ್ಳತನದ ಪ್ರಕರಣಗಳು ಸಹ ಜಾಸ್ತಿಯಾಗಿದೆ. ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದ ಸರ್ಕಾರಿ ಬಸ್ನಲ್ಲಿ ಮಹಿಳೆಯ ಬ್ಯಾಗ್ನಲ್ಲಿದ್ದ ಸುಮಾರು 90 ಗ್ರಾಂ. ಚಿನ್ನಾಭರಣ ಕಳ್ಳತನವಾಗಿದೆ.
ಹೊಸಪೇಟೆಯಿಂದ ಕೊಪ್ಪಳ ಕಡೆ ಸರ್ಕಾರಿ ಬಸ್ ಹೊರಟಿತ್ತು. ಮುನಿರಾಬಾದ್ ಹತ್ತಿರ ಮಹಿಳೆ ತನ್ನ ಬ್ಯಾಗ್ ನೋಡಿಕೊಂಡಿದ್ದಾರೆ, ಅಷ್ಟರಲ್ಲಿ ಬ್ಯಾಗ್ನಲ್ಲಿದ್ದ 90 ಗ್ರಾಂ ಚಿನ್ನಾಭರಣವನ್ನ ಐನಾತಿ ಕಳ್ಳರು ಎಗರಿಸಿಬಿಟ್ಟಿದ್ದರು. ಈ ವಿಷಯ ತಿಳಿದ ಅಂಬ್ಬಮ್ಮ ಎಂಬ ಮಹಿಳೆ ಬಸ್ನಲ್ಲಿಯೇ ರಾದ್ದಾಂತ ಮಾಡಿದ್ದಾಳೆ. ಹೀಗಾಗಿ ಪ್ರಯಾಣಿಕರ ಸಮೇತವಾಗಿ ಸಾರಿಗೆ ಬಸ್ ಪೊಲೀಸ್ ಠಾಣೆಗೆ ಬಂದಿದೆ. ಸುಮಾರು 80 ಜನ ಪ್ರಯಾಣಿಕರಿದ್ದ ಸರ್ಕಾರಿ ಬಸ್ ಅನ್ನು ಪೊಲೀಸ್ ಠಾಣೆಗೆ ಚಾಲಕ ಕರೆದೋಯ್ದಿದ್ದಾನೆ.
ಎಲ್ಲಾ ಪ್ರಯಾಣಿಕರನ್ನು ಚೆಕ್ ಮಾಡಿದ್ರೂ ಸಹ ಕಳ್ಳತನವಾದ ಒಡವೆ ಸಿಕ್ಕಿಲ್ಲ. ಇನ್ಸಪೆಕ್ಟರ್ ಲಖನ್ ಮಸಗುಪ್ಪಿ ನೇತೇತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ತಪಾಸಣೆ ನಡೆಸಿದ್ರೂ ಪತ್ತೆಯಾಗಿಲ್ಲ ಬಂಗಾರದ ಒಡವೆಗಳು. ಹೊಸಪೇಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.