ಪುಷ್ಪ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಆದರೆ, ಒಬ್ಬ ಮಹಿಳೆಯ ಸಾವು ಹಾಗೂ ಆ ಮಹಿಳೆಯ ಮಗನ ಜೀವನ್ಮರಣ ಹೋರಾಟ, ಅದಕ್ಕೆ ಕೌಂಟರ್ ಆಗಿ ಅಲ್ಲು ಅರ್ಜುನ್ ಅರೆಸ್ಟ್, ಆಮೇಲೆ ರಿಲೀಸ್.. ಎಲ್ಲ ಆದ್ಮೇಲೆ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮುಖವಾಡ ಕಳಚಿಟ್ಟಿದ್ದಾರೆ. ಅಲ್ಲು ಅರ್ಜುನ್ ಅದಕ್ಕೆ ಕೌಂಟರ್ ಕೊಟ್ಟಿದ್ದಾರೆ. ಆದರೆ ಈಗ ಅಲ್ಲು ಅರ್ಜುನ್ ಸುಳ್ಳು ಹೇಳಿದರಾ..? ಸಾಕ್ಷಿಗಳನ್ನ ನೀವೇ ನೋಡಿ.
ಅಲ್ಲು ಅರ್ಜುನ್ ಗ್ರಹಚಾರ ಬಿಡಿಸಿದ ಸಿಎಂ ರೇವಂತ್ ರೆಡ್ಡಿ..!
ರೇವಂತ್ ರೆಡ್ಡಿಗೆ ಕೌಂಟರ್ ಕೊಡೋಕೆ ಹೋಗಿ ತಗ್ಲಾಕ್ಕೊಂಡ ಅಲ್ಲು ಅರ್ಜುನ್..!
ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ಅವರನ್ನು ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಾದ ಮೇಲೆ, ಅಲ್ಲು ಅರ್ಜುನ್ ಪ್ರೆಸ್ ಮೀಟ್ ಮಾಡಿ, ಮುಖ್ಯಮಂತ್ರಿಗೆ ಕೌಂಟರ್ ಕೊಟ್ಟಿದ್ದಾರೆ. ಆದರೆ ಕೌಂಟರ್ ಕೊಡೋ ವೇಳೆ ಅಲ್ಲು ಅರ್ಜುನ್, ಪುಂಖಾನುಪುಂಖವಾಗಿ ಸುಳ್ಳು ಹೇಳಿ ತಗ್ಲಾಕ್ಕೊಂಡಿದ್ದಾರೆ. ಅಂತಹ ಸುಳ್ಳು ಸತ್ಯಗಳ ನಡುವೆ ವಿಡಿಯೋ ಸಾಕ್ಷಿಗಳು ಇಲ್ಲಿವೆ.
ಅಲ್ಲು ಅರ್ಜುನ್ ಹೇಳಿದ ಸುಳ್ಳು ನಂ.1
ಪೊಲೀಸರು ಪರ್ಮಿಷನ್ ಕೊಟ್ಟಿದ್ದರು..!
ಸಂಧ್ಯಾ ಥಿಯೇಟರಿಗೆ ಬಂದು ಅಭಿಮಾನಿಗಳ ಜೊತೆ ಸಿನಿಮಾ ನೋಡೋದಕ್ಕೆ ಪೊಲೀಸರಿಗೆ ಭದ್ರತೆ ಕೊಡಿ ಅಂತಾ ಥಿಯೇಟರಿನವರು ಪತ್ರ ಬರೆದಿದ್ದರೇ ಹೊರತು, ಪೊಲೀಸರು ಪರ್ಮಿಷನ್ ಕೊಟ್ಟಿರಲಿಲ್ಲ. ಪತ್ರ ಬರೆದದ್ದು ಡಿಸೆಂಬರ್ 2ನೇ ತಾರೀಕು ಪೊಲೀಸರು 3ನೇ ತಾರೀಕು ಥಿಯೇಟರಿಗೆ ಒಂದೇ ಒಂದು ಎಕ್ಸಿಟ್ ಡೋರ್ ಇದೆ. ನೂಕುನುಗ್ಗಲು ಆಗುತ್ತದೆ. ಪರಿಸ್ಥಿತಿ ನಿರ್ವಹಣೆ ಸಾಧ್ಯ ಇಲ್ಲ. ಸಿನಿಮಾ ಟೀಂ ಬರೋದು ಬೇಡ ಎಂದಿದ್ದರು. ಅದನ್ನು ಮೀರಿ ಅಲ್ಲು ಅರ್ಜುನ್ ಬಂದರು ಎನ್ನುವುದು ಸಿಎಂ ರೇವಂತ್ ರೆಡ್ಡಿ ಕೊಟ್ಟಿರೋ ಕೌಂಟರ್.
ಅಲ್ಲು ಅರ್ಜುನ್ ಹೇಳಿದ ಸುಳ್ಳು ನಂ.2
ನೋವಿನಲ್ಲಿ ಗೆಲುವನ್ನೇ ಸಂಭ್ರಮಿಸಲಿಲ್ಲ..!
ಗೃಹಿಣಿ ರೇವತಿ ಮೃತಪಟ್ಟು, ಅವರ ಮಗ ಶ್ರೀಜಿತ್ ಆಸ್ಪತ್ರೆಗೆ ಸೇರಿದ ವಿಚಾರ ತಿಳಿದ ಕೂಡಲೇ ಪುಷ್ಪ-2 ಚಿತ್ರ ಗೆಲುವನ್ನು ಸಂಭ್ರಮಿಸೋಕೆ ಆಗಲಿಲ್ಲ ಅಂತಾರೆ ಅಲ್ಲು ಅರ್ಜುನ್. ಆದರೆ ವಿಡಿಯೋಗಳಲ್ಲಿ ಕಾಣುವುದೇ ಬೇರೆ. ಘಟನೆಯ ನಂತರವೂ ಅಲ್ಲು ಅರ್ಜುನ್ ಮತ್ತು ಪುಷ್ಪ ಚಿತ್ರತಂಡ ಅದ್ಧೂರಿಯಾಗಿ ಪಾರ್ಟಿ ಮಾಡಿದೆ.
ಅಲ್ಲು ಅರ್ಜುನ್ ಹೇಳಿದ ಸುಳ್ಳು ನಂ.3
ಪೊಲೀಸರು ಹೇಳಿದ ಕೂಡಲೇ ಹೊರಟೆ. ಸಿನಿಮಾ ನೋಡಲಿಲ್ಲ..!
ವಿಡಿಯೋಗಳಲ್ಲಿ ಸಿನಿಮಾವನ್ನು 3 ಗಂಟೆ 20 ನಿಮಿಷ ಆಗುವವರೆಗೂ ಪ್ರೇಕ್ಷಕರ ಜೊತೆಯಲ್ಲೇ ಕುಳಿತು ನೋಡಿರುವುದಕ್ಕೆ ದಾಖಲೆ ಇದೆ. ಸಿನಿಮಾ ಶುರುವಾಗಿದ್ದು 10 ಗಂಟೆ 40 ನಿಮಿಷಕ್ಕೆ. ಸಿನಿಮಾವನ್ನು ನೋಡಲೇ ಇಲ್ಲ, ಸುಮ್ಮನೆ ಹೋದೆ ಎನ್ನುವುದು ಮತ್ತೊಂದು ಸುಳ್ಳು.
ಅಲ್ಲು ಅರ್ಜುನ್ ಹೇಳಿದ ಸುಳ್ಳು ನಂ.4
ರೋಡ್ ಶೋ ಮಾಡಲೇ ಇಲ್ಲ..!
ಇನ್ನು ಅಲ್ಲು ಅರ್ಜುನ್ ಹೇಳಿರೋ ಪ್ರಕಾರ, ಥಿಯೇಟರಿನ ಹೊರಗೆ ರೋಡ್ ಶೋ ಮಾಡಲಿಲ್ಲ. ಸುಮ್ಮನೆ ಕೈಬೀಸಿದೆ ಅಷ್ಟೇ. ಆದರೆ ವಿಡಿಯೋಗಳಲ್ಲಿ ಅಲ್ಲು ಅರ್ಜುನ್, ಕಾರಿನ ಓಪನ್ ಟಾಪ್ನಲ್ಲಿ ನಿಂತುಕೊಂಡು ರೋಡ್ ಶೋ ಮಾಡಿರುವುದಕ್ಕೆ ಸಾಕ್ಷಿ ಸಿಕ್ಕಿವೆ.
ಅಲ್ಲು ಅರ್ಜುನ್ ಹೇಳಿದ ಸುಳ್ಳು ನಂ.5
ಸಾಂತ್ವನ ಹೇಳುವುದಕ್ಕೆ ಕೋರ್ಟ್ ಅಡ್ಡಿ..!
ಇದು ಅಲ್ಲು ಅರ್ಜುನ್ ಹೇಳಿರುವ ಮತ್ತೊಂದು ಸುಳ್ಳು. ಏಕೆಂದರೆ ಘಟನೆಯಲ್ಲಿ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡುವುದಕ್ಕೆ ನ್ಯಾಯಾಲಯದಿಂದ ಯಾವ ಅಡ್ಡಿಯೂ ಇರಲಿಲ್ಲ.
ಇಂತಹ ಸುಳ್ಳುಗಳು ಬೇಜಾನ್ ಇವೆ. ಪುಷ್ಪ-02 ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದ ಅಲ್ಲು ಅರ್ಜುನ್ ಅವರಿಗೆ ಅಹಂಕಾರ ತಲೆಗೇರಿತ್ತು. ಹೀಗಾಗಿಯೇ ಅವರು ಯಾವುದಕ್ಕೂ ಡೋಂಟ್ ಕೇರ್ ಎನ್ನುವ ಮನಸ್ಥಿತಿ ಇಟ್ಟುಕೊಂಡಿದ್ದರು. ಘಟನೆ ನಡೆದ ತಾವು ಅನುಮತಿ ಕೊಟ್ಟಿಲ್ಲದೇ ಇದ್ದರೂ ಅಲ್ಲು ಅರ್ಜುನ್ ಬರುತ್ತಾರೆ ಎಂಬ ಕಾರಣಕ್ಕೆ, ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಪೊಲೀಸರ ಯಾವ ಬೇಡಿಕೆಗೂ ಅಲ್ಲು ಅರ್ಜುನ್ ಸ್ಪಂದಿಸಲಿಲ್ಲ. ಅಂತಿಮವಾಗಿ ದುರಂತ ಸಂಭವಿಸಿತು ಎನ್ನುವ ಮಾತು ಕೇಳಿ ಬರ್ತಾ ಇದೆ.
ಸಿನಿಮಾಗಳಲ್ಲಿ ತಗ್ಗೋದಿಲ್ಲ, ಬಗ್ಗೋದಿಲ್ಲ ಅಂತಾ ಹೇಳೋದೇ ಬೇರೆ. ಅಲ್ಲಿ ಹೀರೋಗೆ, ಡ್ರೈರೆಕ್ಟರ್ ಡೈಲಾಗ್ ಕೊಟ್ಟಿರ್ತಾರೆ. ಆದರೆ ರಿಯಲ್ ಲೈಫ್ನಲ್ಲಿ ಹಾಗಿರಲ್ಲ. ಇಲ್ಲಿ ಒಂದು ಸಿಸ್ಟಂ ಇರುತ್ತೆ. ಆ ಸಿಸ್ಟಮ್ಮಿಗೆ ಹೊಂದಿಕೊಂಡೇ ಬದುಕಬೇಕು. ಅದು ಅಲ್ಲು ಅರ್ಜುನ್ ಅವರಿಗೆ ಅರ್ಥವಾದಂತಿಲ್ಲ ಅನ್ನೋದು, ಅಲ್ಲು ಅರ್ಜುನ್ ಅವರನ್ನೂ ಪ್ರೀತಿಸೋ ಅಭಿಮಾನಿಗಳ ಮಾತು.