ಪುಷ್ಪ 2 ಸಿನಿಮಾ ತೆರೆ ಕಂಡಿದ್ದೇ ಕಂಡಿದ್ದು, ಶುರುವಾಯ್ತು ಸಂಕಷ್ಟಗಳ ಸರಮಾಲೆ. ಅಲ್ಲು ಅರ್ಜುನ್ಗೆ ಪುಷ್ಪ 2 ಸಿನಿಮಾ ಒಂದು ಕಡೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದು ಕೊಟ್ಟರೇ ಮತ್ತೊಂದು ಕಡೆ ವಿವಾದಗಳ ಬರೆಯನ್ನೇ ಎಳೆಯುತ್ತಿದೆ. ನೆನ್ನೆ ಅಷ್ಟೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಸೆಂಬ್ಲಿಯಲ್ಲಿ ಅಲ್ಲು ಅರ್ಜುನ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೀಗ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಕೆಂಡಾಮಂಡಲರಾಗಿದ್ದಾರೆ.
ನನಗೆ ಪೊಲೀಸರು ಹೇಳಲಿಲ್ಲ, ಕರೆಯಲಿಲ್ಲ ಅಂತಾರೆ. ನನಗೆ ಹೇಳಿದ್ದರೆ ಹೊರಟು ಹೋಗುತ್ತಿದ್ದೆ ಅಂತಾರೆ.. ಯಾರು ನೀನು.. ನೀನೇನು ತೀಸ್ ಮಾರ್ ಖಾನ್ನಾ..? ನೀನೂ ಕೂಡಾ ಒಬ್ಬ ಸಾಮಾನ್ಯ ನಾಗರಿಕ, ಅಷ್ಟೇ. ನಿನ್ನ ಆಧಾರ್ ಕಾರ್ಡ್ ಎಲ್ಲಿದೆ.. ಅದನ್ನು ಹೇಳು ಮೊದಲು. ನೀನು ತೆಲಂಗಾಣದವನಾ.. ಆಂಧ್ರಪ್ರದೇಶದವನಾ.. ನೀನು ಬರೀ ನಾಟಕ ಮಾಡ್ಕೊಂಡು ಇದ್ದೀಯ, ಬಿಡು ಎಂದು ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಸಿಡಿದಿದ್ದಾರೆ.
ಸದನದಲ್ಲಿ ಗಂಭೀರ ವಿಷಯಗಳ ಚರ್ಚೆಗಳಾಗುತ್ತವೆ.. ನಿನ್ನ ಬಗ್ಗೆ ಏಕೆ ಸದನದಲ್ಲಿ ಚರ್ಚೆಯಾಗಬೇಕು..? ಏನ್ ಮಾಡ್ತಿದ್ದೀಯ.. ನಿನಗೆ ಯಾವನು ಗೈಡ್ ಮಾಡ್ತಿದ್ದಾನೆ.. ನೀವು ಹೇಳೋದೊಂದು.. ಮಾಡೋದೊಂದು.. ಹುಷಾರ್.. ನಾಲಗೆ ಸರಿಯಾಗಿರಲಿ, ಹಿಡಿತದಲ್ಲಿರಲಿ.. ಇಲ್ಲದಿದ್ದರೆ.. ಅಷ್ಟೇ. ಪೊಲೀಸರ ಬಗ್ಗೆ ಲಘುವಾಗಿ ಮಾತನಾಡಿದರೆ, ಬೆದರಿಸಿದರೆ.. ಹುಷಾರ್.. ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ.. ಪೊಲೀಸರ ಬಗ್ಗೆ ಮಾತನಾಡುವಾಗ ಕಂಟ್ರೋಲಿನಲ್ಲಿರು ಎಂದು ಅಲ್ಲು ಅರ್ಜುನ್ಗೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ ತೆಲಂಗಾಣ ಎಸಿಪಿ.
ಸಂಧ್ಯಾ ಥಿಯೇಟರ್ ಘಟನೆಯಲ್ಲಿ ಯಾರ ಮಾತನ್ನೂ ಕೇಳಲಿಲ್ಲ. ಘಟನೆ ಬಗ್ಗೆ ಹೇಳಿದಾಗ ಅಹಂಕಾರದ ಉತ್ತರ ಕೊಟ್ಟಿದ್ದರು. ಅವರ ಕುಟುಂಬಕ್ಕೆ ದುಡ್ಡು ಕೊಡ್ತೇನೆ ಎಂದು ಹೇಳಿದ್ದರು. ಅದು ಸಂತ್ರಸ್ತರಿಗೆ ಲಂಚ ಕೊಟ್ಟಂತಾಗುವುದಿಲ್ಲವೇ.. ನೀನು ಇರುವುದೇ ಯಾರೋ ಕೊಟ್ಟಿರುವ ಭೂಮಿಯಲ್ಲಿ.. ಜನ ರೊಚ್ಚಿಗೆದ್ದರೆ ಎಲ್ಲವೂ ಕ್ಷಣದಲ್ಲಿ ಹೋಗುತ್ತದೆ.. ಎಂದು ಅಲ್ಲು ಅರ್ಜುನ್ಗೆ ಅಹಂಕಾರ ಬಿಡುವಂತೆ ಎಚ್ಚರಿಕೆ ಕೊಟ್ಟು ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಹೇಳಿದ್ದಾರೆ.