ಮಂಡ್ಯದಲ್ಲಿ ನಡೆದ 3 ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೆನ್ನೆ ವಿದ್ಯುಕ್ತ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಮಾಂಸಹಾರ ಊಟದ ಗಲಾಟೆ, ಸಿಟಿ ರವಿ ವಿರುದ್ಧ ಪ್ರತಿಭಟನೆ ಸೇರಿದಂತೆ ಕೆಲವು ಸಂಘರ್ಷಗಳು ನಡೆದರೂ, ಸಾಹಿತ್ಯ ಸಮ್ಮೇಳನ ಸಂಪನ್ನವಾಗಿದೆ. ಈ ಸಮ್ಮೇಳನದಲ್ಲಿ ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಮುಖಾಮುಖಿಯಾಗಿದ್ರು.. ಈ ಬಗ್ಗೆ ಒಂದು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
ಈ ವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ಏನ್ ಸ್ಪೆಷಲ್ ಅಂದ್ರೆ.. ಇಷ್ಟು ದಿನ ರಾಜಕೀಯದಲ್ಲಿ ಬದ್ಧವೈರಿಗಳಂತೆ ಸಿಕ್ಕ ಸಿಕ್ಕ ಕಡೆ ಮಾತಿನ ವಾಗ್ವಾದ ಮಾಡ್ಕೊಂಡು ಇದ್ದ ವೈರಿಗಳು ಇವರೇ. ಚೆಲುವರಾಯಸ್ವಾಮಿನ ಬೆಳೆಸಿದ್ದೇ ಜೆಡಿಎಸ್ ಅಂತಾ ಹೆಚ್ಡಿ ಕುಮಾರಸ್ವಾಮಿ.. ಕುಮಾರಸ್ವಾಮಿನ ಮುಖ್ಯಮಂತ್ರಿ ಮಾಡಿದ್ದೇ ನಾನು ಅಂತಾ ಚೆಲುವರಾಯಸ್ವಾಮಿ ಇಂತಹ ಬಡಿದಾಟ ಹೋರಾಟ ನಡೆಯುತ್ತಲೇ ಇತ್ತು. ಆದರೇ ಇದೀಗ ಅದೆಷ್ಟೋ ವರ್ಷಗಳ ನಂತರ ಇವರಿಬ್ಬರು ಒಂದೇ ವೇದಿಕೆಯಲ್ಲಿ ಪರಸ್ಪರ ಮೀಟ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕುಚಿಕು ಗೆಳೆಯರು. ಆದರೆ ರಾಜಕೀಯ ಬೆಳವಣಿಗೆ ಇಂದ ಚಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ರು. ಅಲ್ಲಿಂದ ಕುಮಾರಣ್ಣ ಹಾಗೂ ಚಲುವರಾಯಸ್ವಾಮಿ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಆದ್ರೆ, ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಕುಮಾರಸ್ವಾಮಿಯನ್ನ ಚಲುವರಾಯಸ್ವಾಮಿ ಸನ್ಮಾನಿಸಿದ್ದಾರೆ. ವೇದಿಕೆ ಮೇಲೆ ಕುಮಾರಸ್ವಾಮಿಗೆ ಸನ್ಮಾನ ಮಾಡುವಾಗ ನೆರೆದಿದ್ದ ಜನರು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ.
ಮಾಜಿ ದೋಸ್ತಿಗಳ ಸಮಾಗಮ ಕಂಡು ಮಂಡ್ಯ ಜನರ ಖುಷಿ ಜೋರಾಗಿತ್ತು. ಈ ವೇಳೆ ಕುಮಾರಣ್ಣ, ಚಲುವಣ್ಣನ ಕಾರ್ಯವನ್ನ ಮೆಚ್ಚಿ ಹೊಗಳಿದರು. ಉಸ್ತುವಾರಿ ಸಚಿವರಿಂದಲೇ ಕುಮಾರಸ್ವಾಮಿಗೆ ಸನ್ಮಾನ, ಚಲುವರಾಯಸ್ವಾಮಿಯನ್ನ ಕುಮಾರಸ್ವಾಮಿ ಶ್ಲಾಘಿಸಿದ್ದು, ಮಾಜಿ ದೋಸ್ತಿಗಳ ಸಮಾಗಮ. ಇದೆಲ್ಲಾ ಮಂಡ್ಯ ಜಿಲ್ಲೆ ಜನರ ಶಿಳ್ಳೆ, ಚಪ್ಪಾಳೆಗಳನ್ನ ಗಿಟ್ಟಿಸಿಕೊಂಡಿದೆ. ಈ ಒಂದು ಅಪೂರ್ವ ಸಂಗಮದ ಕ್ಷಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಿದೆ.