ಆಟೋ ರಿಕ್ಷಾ ಪ್ರಯಾಣ ದರ ಶೀಘ್ರದಲ್ಲೇ ಏರಿಕೆ ಕಾಣಬಹುದು ಎಂದು ವರದಿಯಾಗಿದೆ. ಹಣದುಬ್ಬರಕ್ಕೆ ತಕ್ಕಂತೆ ದರ ಏರಿಕೆಗೆ ನಗರದಲ್ಲಿ ಆಟೋ ಚಾಲಕರ ಸಂಘಗಳು ಒತ್ತಾಯಿಸುತ್ತಿವೆ. ಈ ಹಿನ್ನಲೆ ಇಂದು ಪ್ರಾದೇಶಿಕ ಆಯುಕ್ತ ಜೊತೆಗೆ ನಡೆಯಬೇಕಿದ್ದ ಸಭೆ ರದ್ದಾಗಿದ್ದು, ಹೊಸ ವರ್ಷಕ್ಕೆ ಆಟೋ ದರ ಏರಿಕೆ ಬಹುತೇಕ ಡೌಟ್ ಎನ್ನಲಾಗ್ತಿದೆ.
ಈಗಾಗಲೇ ಆಟೋ ಯೂನಿಯನ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧಿಕಾರಿಗಳ ಜೊತೆಗೆ ಗನಿಗದಿ ಆಗಿದ್ದ ಸಭೆ, ಕೆಲವು ಕಾರಣಗಳಿಂದ ಸಾರಿಗೆ ಇಲಾಖೆ ಮುಂದೂಡಿದೆ. ಹೀಗಾಗಿ ಹೊಸ ವರ್ಷಕ್ಕೆ ಆಟೋ ದರ ಏರಿಕೆ ಬಹುತೇಕ ಡೌಟ್ ಆಗಿದೆ. ಆದರೆ ಈ ಬಗ್ಗೆ ಸಾರಿಗೆ ಇಲಾಖೆ ಇನ್ನು ಅಧಿಕೃತ ದಿನಾಂಕವನ್ನು ನಿಗದಿ ಮಾಡಿಲ್ಲ.
Continue Reading