ಕನ್ನಡದ ಟಾಪ್ ರಿಯಾಲಿಟಿ ಶೋ ಅಂದರೆ ಅದು ಬಿಗ್ಬಾಸ್ ಕನ್ನಡ. ಕನ್ನಡಿಗರ ಮನ ಗೆದ್ದಿರುವ ಈ ಶೋ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನ ಪಡೆದು, ವೀಕ್ಷರನ್ನು ಆಕರ್ಷಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಶೋ 100 ದಿನ ಪೂರ್ಣಗೊಳಿಸಲಿದೆ. ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ಸಖತ್ ಜಗಳ ಮಾಡುತ್ತಿರುತ್ತಾರೆ, ತಮ್ಮ ಕೋಪವನ್ನ ಹೊರ ಹಾಕುತ್ತಾರೆ. ಅದರಂತೆ ಇಂದು ಬಿಗ್ ಮನೆಯಲ್ಲಿ ಚೈತ್ರಾ ಕುಂದಾಪುರ- ಐಶ್ವರ್ಯ ನಡುವೆ ಮಾತಿನ ಮಲ್ಲಯುದ್ಧವೇ ಜೋರಾಗಿ ನಡೆದಿದೆ.
ಇಂದು ಬಿಗ್ಬಾಸ್ ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕು ಎಂಬ ಟಾಸ್ಕ್ ಅನ್ನ ಬಿಗ್ಬಾಸ್ ನೀಡಿದ್ದರು. ಅದರಂತೆ ಎಚ್ಚೆತ್ತುಕೊಳ್ಳಬೇಕು ಎಂದು ಉಗ್ರಂ ಮಂಜು ಚೈತ್ರಾ ಮುಖಕ್ಕೆ ಟೀ ಚೆಲ್ಲಿದ್ದಾರೆ. ಐಶ್ವರ್ಯ ಮುಖಕ್ಕೆ ಭವ್ಯ ಕೂಡ ಎಚ್ಚೆತ್ತುಕೋ ಎಂದು ಟೀ ಚೆಲ್ಲಿದರು. ಆದರೆ ಮನೆಯಲ್ಲಿ ಟಾರ್ಗೆಟ್ ನಾಮಿನೇಷನ್ ವಿಷಯವಾಗಿ ಐಶರ್ಯ ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವಾರ ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಅಂತ ಐಶ್ವರ್ಯ ಚೈತ್ರಾಗೆ ತುಂಬಾ ಏರು ಧ್ವನಿಯಲ್ಲಿ ಹೇಳಿದ್ದಾರೆ. ಇಬ್ಬರ ನಡುವೆ ವಾಕ್ಸಮರ ಜೋರಾಗಿಯೇ ನಡೆದಿದ್ದು ಎಷ್ಟೇ.. ಮಾತನಾಡುತ್ತಿಯಾ ಎಂದು ಭವ್ಯ ಹೇಳಿದ್ದಾರೆ. ಬಾಯಿ ಮುಚ್ಚೆ ಅಂತ ಐಶ್ವರ್ಯ ಹೇಳಿದಾಗ ಚೈತ್ರಾ ಕೈಯನ್ನು ಜೋರಾಗಿ ಟೇಬಲ್ಗೆ ಸಿಟ್ಟಿನಿಂದ ಗುದ್ದಿದ್ದಾರೆ. ಹೀಗಾಗಿ ಕೈಯಲ್ಲಿದ್ದ ಬಳೆಗಳು ಪೀಸ್ ಪೀಸ್ ಆಗಿವೆ. ಮುಚ್ಚುಕೊಂಡು ಇರೇ.. ನೀನು ಎಂದು, ಚೈತ್ರಾ ಸಿಟ್ಟಿನಲ್ಲಿ ಹೇಳಿದ್ದಾರೆ.