ಮಹಿಳೆಯೊಬ್ಬರು ತನಗೆ ಇಬ್ಬರು ಗಂಡಂದಿರಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕೊರಳಲ್ಲಿ ಎರಡು ಮಂಗಳಸೂತ್ರ ಹಾಕಿಕೊಂಡು ನಾವು ಎಲ್ಲವನ್ನು ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ. ಅವರಿಬ್ಬರೂ ಸಹೋದರರಾಗಿದ್ದು, ಈಗ ನಾವು ಮೂವರೂ ಒಟ್ಟಿಗೆ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾಳೆ.
ಇಬ್ಬರು ಗಂಡಂದಿರ ಮಧ್ಯೆ ನಿಂತು ಪೋಸ್ ಕೊಟ್ಟ ವಿಡಿಯೋವೊಂದು ವೈರಲ್ ಆಗ್ತಿದೆ. ವೀಡಿಯೋ ನೋಡಿದ ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಮಹಿಳೆ ಇಬ್ಬರು ಸಹೋದರರನ್ನು ಮದುವೆಯಾಗಿದ್ದು, ಒಬ್ಬ ಪತ್ನಿ ಇಬ್ಬರು ಗಂಡಂದಿರೊಂದಿಗೆ ವಾಸ ಮಾಡುತ್ತಿದ್ದಾರಂತೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ವ್ಯಕ್ತಿಯೊಬ್ಬ ಆಕೆಯನ್ನು ಸಂದರ್ಶಿಸಿ, ಮಹಿಳೆಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಆ ವ್ಯಕ್ತಿ ಮೊದಲು ಕೇಳಿದ್ದು ಇವರಿಬ್ಬರು ಯಾರು? ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಮಹಿಳೆ ಮೊದಲ ಗಂಡ ಮತ್ತು ಎರಡನೇ ಗಂಡ ಇಬ್ಬರೂ ಸಹೋದರರು ಎಂದು ಹೇಳಿದ್ದಾರೆ.
ಮಹಿಳೆ ತನ್ನ ಗಂಡಂದಿರಿಗಾಗಿ ಎರಡು ಮಂಗಳಸೂತ್ರಗಳನ್ನು ಧರಿಸಿದ್ದಾಳೆ. ಒಬ್ಬ ಗಂಡನಿಗೆ ಒಂದು ಮಂಗಳಸೂತ್ರವಿದೆ ಮತ್ತು ಇನ್ನೊಬ್ಬ ಗಂಡನಿಗೆ ಇನ್ನೊಂದು ಮಂಗಳಸೂತ್ರವಿದೆ ಎಂದು ಮಹಿಳೆ ಹೇಳಿದ್ದಾಳೆ. ಇಬ್ಬರು ಗಂಡಂದಿರಿದ್ದರೆ ಎರಡು ಮಂಗಳಸೂತ್ರವನ್ನು ಧರಿಸುವುದು ಅವಶ್ಯಕ ಎಂದು ಹೇಳಿದ್ದಾಳೆ.
ಈ ಬಗ್ಗೆ ಸಂದರ್ಶನ ಮಾಡುವ ವ್ಯಕ್ತಿ, ಇದನ್ನೆಲ್ಲ ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದ್ದಾನೆ. “ನಾವು ಎಲ್ಲಿಗೆ ಹೋದರೂ, ನಾವು ಒಟ್ಟಿಗೆ ಹೋಗುತ್ತೇವೆ, ಒಟ್ಟಿಗೆ ವಾಸಿಸುತ್ತೇವೆ, ಒಟ್ಟಿಗೆ ತಿನ್ನುತ್ತೇವೆ ಮತ್ತು ಒಟ್ಟಿಗೆ ಮಲಗುತ್ತೇವೆ” ಎಂದು ಮಹಿಳೆ ಹೇಳುತ್ತಾರೆ.
ವೈರಲ್ ಆಗುತ್ತಿರುವ ಈ ವಿಡಿಯೋಗೆ ಒಬ್ಬ ಹೆಂಡತಿಯ ಇಬ್ಬರು ಗಂಡಂದಿರು ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ 2.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವೈರಲ್ ವಿಡಿಯೋಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ಇದು ಕ್ರೂರ ಯುಗ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬರೆದರು, “ಈಗ ಇದನ್ನೆಲ್ಲಾ ನೋಡಬೇಕಾಗಿದೆ.” “ಮೂವರನ್ನೂ ಜೈಲಿಗೆ ಹಾಕಿ” ಎಂದು ಬರೆದಿದ್ದಾರೆ.