ತಾರಕಕ್ಕೇರಿದೆ ಪುಷ್ಪ 2 ಸಂಧ್ಯಾ ಥಿಯೇಟರ್ ದುರ್ಘಟನೆ. ICUನಲ್ಲಿ ಮೃತ ರೇವತಿಯ ಪುತ್ರನ ಸ್ಥಿತಿ ಚಿಂತಾಜನಕವಾಗಿದೆ. ರೇವತಿ ಪುತ್ರನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಅಲ್ಲು ಅರ್ಜುನ್ಗೆ ತಪ್ಪಿಲ್ಲ ಸಂಕಷ್ಟದ ಸರಮಾಲೆ. ಒಂದು ಕಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಿದೆ. ಇನ್ನೊಂದು ಕಡೆ ಅಲ್ಲು ಅರ್ಜುನ್ ವಿರುದ್ದ ತೆಲಂಗಾಣ ಸರ್ಕಾರ ಫುಲ್ ಗರಂ ಆಗಿದೆ. ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ತೆಲಂಗಾಣ ಸರ್ಕಾರ.
ತೆಲಂಗಾಣ ವಿಧಾನಸಭೆಯಲ್ಲೇ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ಕಿಡಿಕಾರಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಸೆಂಬ್ಲಿ ಸ್ಪೀಚ್ ನಂತರ ಸುದ್ದಿಗೋಷ್ಠಿ ನಡೆಸಿ ಸುಳ್ಳಿನ ಕಂತೆ ಕಟ್ಟಿದ್ದರು ನಟ ಅಲ್ಲು ಅರ್ಜುನ್. ಅಲ್ಲು ಅರ್ಜುನ್ ಸುದ್ದಿಗೋಷ್ಠಿ ಮಾಡಿದ್ದು ಎಷ್ಟು ಸರಿ..? ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿಸಲಾಗುವುದು.. ಹುಷಾರ್ ಎಂದಿದ್ದರು ತೆಲಂಗಾಣ ACP. ಫ್ಯಾನ್ಸ್ ಬಳಿ ಕೆಟ್ಟದಾಗಿ ಪೋಸ್ಟ್ ಮಾಡದಿರಲು ಅಲ್ಲು ಅರ್ಜುನ್ ಮನವಿ ಮಾಡಿದ್ದರು.
ಅಲ್ಲು ಅರ್ಜುನ್ ವಿರುದ್ದ ಪ್ರತಿಷ್ಠೆಗೆ ಬಿದ್ದಿದೇ ತೆಲಂಗಾಣ ಸರ್ಕಾರ, ಪೊಲೀಸ್ & ಸಿಎಂ ರೇವಂತ್ ರೆಡ್ಡಿ. ನಟ ಅಲ್ಲು ಅರ್ಜುನ್ ಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲು ಏರಿದೆ. ಖುದ್ದು ಸರ್ಕಾರವೇ ಅಲ್ಲು ಅರ್ಜುನ್ ಬೇಲ್ ಕ್ಯಾನ್ಸಲ್ ಮಾಡಿಸಲು ಮುಂದಾಗಿದೆ. ಇಂದೇ ಹೈ ಕೋರ್ಟ್ ಗೆ ಮನವಿ ಸಲ್ಲಿಸಲಿರೋ ತೆಲಂಗಾಣ ಸರ್ಕಾರ ಅಲ್ಲು ಅರ್ಜುನ್ ವಿರುದ್ದ ಸಮರ ಸಾರಿ ನಿಂತಿದೆ. ಒಂದು ವೇಳೆ ಸರ್ಕಾರ ಅಲ್ಲು ಅರ್ಜುನ್ ಬೇಲ್ ಕ್ಯಾನ್ಸೆಲ್ ಮಾಡಿಸಿದ್ರೆ ಮತ್ತೆ ಜೈಲು ಪಾಲಾಗೋದು ಫಿಕ್ಸ್ ಅಂತಾನೇ ಹೇಳಬಹುದು.