ಕನ್ನಡ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ನಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ವಾರದ ಎಲಿಮಿನೇಷನ್ ಟ್ವಿಸ್ಟ್ಗೆ ಇವತ್ತು ಮೆಗಾ ಕ್ಲೈಮ್ಯಾಕ್ಸ್ ಕಾದಿದೆ.
ಬಿಗ್ಬಾಸ್ ನ ಸ್ಪರ್ಧಿಗಳ ಪೈಪೋಟಿ ಜೋರಾಗಿದೆ. 12ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್ನಲ್ಲಿ ಐಶ್ವರ್ಯ ಹಾಗೂ ತ್ರಿವಿಕ್ರಮ್ ಡೇಂಜರ್ ಝೋನ್ ತಲುಪಿದ್ದರು. ಕೊನೆಗೆ ತ್ರಿವಿಕ್ರಮ್ ಅವರೇ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿದ್ದು, ಬಿಗ್ಬಾಸ್ ಆದೇಶದಂತೆ ತ್ರಿವಿಕ್ರಮ್ ಬಿಗ್ ಬಾಸ್ ಗೇಟ್ ಓಪನ್ ಮಾಡಲಾಗಿದೆ.
ಬಿಗ್ ಬಾಸ್ ವೀಕ್ಷಕರಿಗೆ ಇವತ್ತು ಮೆಗಾ ಟ್ವಿಸ್ಟ್ ಕಾದಿದೆ. ತ್ರಿವಿಕ್ರಮ್ ಅವರು ಈ ವಾರ ಎಲಿಮಿನೇಟದದದ ಆಗಿದ್ದಾರಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳು ಕೂಡ ತ್ರಿವಿಕ್ರಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ಈಗಲೂ ನಂಬುತ್ತಿಲ್ಲ ಮತ್ತೊಂದು ಸರ್ಪ್ರೈಸ್ ಕಾದಿದೆ ಅಂದುಕೊಂಡೇ ಕಾಲ ಕಳೆಯುತ್ತಿದ್ದಾರೆ.
ಮೂಲಗಳ ಪ್ರಕಾರ ತ್ರಿವಿಕ್ರಮ್ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸಾಧ್ಯತೆ ಕಡಿಮೆ ಇದೆ. ಪ್ರತಿ ಸೀಸನ್ ಅಂತೆ ತ್ರಿವಿಕ್ರಮ್ ಅವರನ್ನ ಬಿಗ್ ಬಾಸ್ ಸೀಕ್ರೆಟ್ ರೂಮ್ಗೆ ಕಳುಹಿಸಿರುವ ಸಾಧ್ಯತೆ ಇದೆ. ಮನೆಯವರ ಮಾತುಗಳನ್ನ ಕೇಳಿಸಿಕೊಂಡು ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಆಗಿ ಎಂಟ್ರಿ ಕೊಡಬಹುದು ಎನ್ನಲಾಗಿದೆ.
ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ಗಳಲ್ಲೂ ತ್ರಿವಿಕ್ರಮ್ ಅವರು ಚೆನ್ನಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್ನಿಂದ ವೀಕ್ಷಕರ ವೋಟಿಂಗ್ ಕೂಡ ಓಪನ್ ಆಗಿಲ್ಲ. ಹೀಗಾಗಿ ತ್ರಿವಿಕ್ರಮ್ ಅವರು ಎಲ್ಲರ ನಿರೀಕ್ಷೆಯಂತೆ ಎಲಿಮಿನೇಟ್ ಆಗದೆ ಇಂದು ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಇದೆ.