ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನು ಪಡೆದ ಖುಷಿಯಲ್ಲಿದ್ದಾರೆ. ಬೆನ್ನು ನೋವು ಅಂತ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ಪಡೆದ ದರ್ಶನ್, ರೆಗ್ಯುಲರ್ ಬೇಲ್ ಸಿಕ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದೀಗ ನಟ ದರ್ಶನ್ ಮೈಸೂರಿನ ತಮ್ಮದೇ ಫಾರಂ ಹೌಸ್ನಲ್ಲಿ ರೆಸ್ಟ್ ಮಾಡ್ತಿದ್ದಾರೆ. ನಟ ದರ್ಶನ್ಗಾಗಿ ಹರಕೆ ಹೊತ್ತಿದ್ದ ಪತ್ನಿ ವಿಜಯಲಕ್ಷ್ಮಿ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ದರ್ಶನ್ ಜೈಲು ಸೇರಿದ ಬಳಿಕ ಪತಿಯನ್ನ ಜೈಲಿಂದ ಹೊರಗೆ ತರಲು ಗುಡಿ-ಗೋಪುರಗಳನ್ನು ಸುತ್ತಿದ್ರು. ಹಲವು ದೇವಸ್ಥಾನಗಳಿಗೆ ತೆರಳಿ ಹರಕೆ ಕಟ್ಟಿದ್ರು. ಇದೀಗ ವಿಜಯಲಕ್ಷ್ಮಿ ಹರಕೆಗಳನ್ನ ತೀರಿಸುತ್ತಿದ್ದಾರೆ. ಇಂದು ವಿಜಯಲಕ್ಷ್ಮಿ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ಅವರನ್ನು ಹೊರತುಪಡಿಸಿ ನಟನ ಕುಟುಂಬಸ್ಥರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದು, ದರ್ಶನ್ ತಾಯಿ ಮೀನಾ ತೂಗುದೀಪ್, ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಕೂಡ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ರು. ಸದ್ಯ ನಟ ದರ್ಶನ್ ಫಾರ್ಮ್ ಹೌಸ್ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.