ನವದೆಹಲಿ : 2023-24ರಲ್ಲಿ ಹಣಕಾಸಿನ ವರ್ಷದಲ್ಲಿ ಬಿಜೆಪಿ ವ್ಯಕ್ತಿಗಳ ಟ್ರಸ್ಟ್ಗಳು ಮತ್ತು ಕಾರ್ಪೊರೇಟ್ ಸಣಸ್ಥೆಗಳಿಂದ 20,000 ರೂ ಮತ್ತು ಅದ್ದಕಿಂತ ಹೆಚ್ಚಿನ ಕೊಡುಗೆಯಾಗಿ ಸುಮಾರು 2,244 ಕೋಟಿ ರೂ .ಗಳನ್ನು ಸ್ವೀಕರಿಸಿದೆ , ಇದು 2022 -23 ರಲ್ಲಿ ಅದರ ದೇಣೆಗೆಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ. 2022-23 ನೇ ಇಸವಿಯಲ್ಲಿ ಬಿಜೆಪಿ ಪಡೆದ ದೇಣಿಗೆಯ ಮೂರು ಪಟ್ಟು ಹೆಚ್ಚು ದೇಣಿಗೆಯನ್ನು 2023-24 ರಲ್ಲಿ ಪಡೆದಿದೆ. ಹೌದು ಈ ಬಾರಿ ಬಿಜೆಪಿಗೆ ಸಂಗ್ರಹವಾದ ಒಟ್ಟು ದೇಣಿಗೆ ಬರೋಬ್ಬರಿ 2,244 ಕೋಟಿ ರೂ. ವಯಕ್ತಿಕ ದೇಣಿಗೆ, ಟ್ರಸ್ಟ್ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ದೇಣಿಗೆ ಒಟ್ಟಾಗಿದೆ.
ಆದರೆ ಕಾಂಗ್ರೆಸ್ ದೇಣಿಗೆಯಲ್ಲಿ ಬಾರೀ ಕಡಿಮೆ ಸಂಗ್ರಹವಾಗಿದ್ದು ಈ ವರ್ಷ 288.9 ಕೋಟಿ ಈ ವರ್ಷ ಹಾಗೂ ಕಳೆದ ವರ್ಷ 2022-23 ರಲ್ಲಿ 79.9 ಕೋಟಿ ಸಂಗ್ರಹವಾಗಿತ್ತು. ಎಲೆಕ್ಷನ್ ಕಮಿಷನ್ ನಲ್ಲಿರುವ 2023-24 ರ ದೇಣಿಗೆ ಸಂಗ್ರಹದ ಅಂಕಿ ಅಂಶಗಳ ಆಧಾರದಲ್ಲಿ ನೋಡಿದಾಗ, ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ 723.6 ಕೋಟಿ ದೇಣಿಗೆ ನೀಡಿದ್ದು, ಕಾಂಗ್ರೆಸ್ ಗೂ 155.4 ಕೋಟಿ ನೀಡಿದೆ.
ಕಾಂಗ್ರೆಸ್ ನ ಮೂರು ಪಟ್ಟು ಹಾಗೂ ಕಾಂಗ್ರೆಸ್ ನ ಒಟ್ಟು ದೇಣಿಗೆಯ ಎರಡು ಪಟ್ಟು ಬಿಜೆಪಿಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನೀಡಿದೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನ ಗರಿಷ್ಠ ದೇಣಿಗೆದಾರರು ಮೇಘ ಇಂಜಿನಿಯರಿಂಗ್ ಹಾಗೂ ಇನ್ಫ್ರಾ ಲಿಮಿಟಿಡ್, ಸೆರಮ್ ಇನ್ಸ್ಟಿಟ್ಯೂಟ್, ಆರ್ಸೆಲೆರ್ ಮಿತ್ತಲ್ ಗ್ರೂಪ್ ಹಾಗೂ ಭಾರತಿ ಏರ್ಟೆಲ್. ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಸ್ವೀಕರಿಸಿದ ದೇಣಿಗೆಯಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ಬೆಂಬಲದ ಪ್ರಮಾಣದಲ್ಲಿ ನಿರಂತರ ಬದಲಾವಣೆ ಕಂಡು ಬರುತ್ತಿದೆ. ಇದು ಅದನ್ನು ಪಕ್ಷಗಳಿಂದ ದೊಡ್ಡ ವಿಕಲ್ಪವಾಗಿ ನಿಲ್ಲಿಸುತ್ತದೆ. ಈ ಬೆಳವಣಿಗೆಯ ಪರಿಣಾಮ, 2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸ್ಪಷ್ಟವಾಗುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಹರಿದು ಬಂದ ದೇಣಿಗೆ ಬಿಜೆಪಿಯ 2023-24 ರ ದೇಣಿಗೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ದಾಖಲೆಯ 212% ನಷ್ಟು ಏರಿಕೆ ಕಂಡಿದೆ. ಜನರಲ್ ಎಲೆಕ್ಷನ್ ಇದ್ದ ಕಾರಣ ಈ ಏರಿಕೆ ಸಹಜವಾಗಿದ್ದು, 2018-19 ರ ಚುನಾವಣೆ ಮುನ್ನವೂ ಬಿಜೆಪಿಗೆ 742 ಕೋಟಿ ರೂ ಸಂಗ್ರಹವಾಗಿತ್ತು, ಕಾಂಗ್ರೆಸ್ ಗೆ 146.8 ಕೋಟಿ ಒಟ್ಟಾಗಿತ್ತು.
ಎಲೆಕ್ಟೋರಲ್ ಟ್ರಸ್ಟ್ ಮೂಲಕ 850 ಕೋಟಿ ರೂ ಬಿಜೆಪಿಗೆ ಒಟ್ಟಾಗಿದ್ದರೆ, ಈ ಪೈಕಿ 723 ಕೋಟಿ ಪ್ರುಡೆಂಟ್ ನಿಂದ ಬಂದಿದೆ, 127 ಕೋಟಿ ಟ್ರಿಂಪ್ ಎಲೆಕ್ಟೋರಲ್ ಟ್ರಸ್ಟ್ ಹಾಗೂ 17.2 ಕೋಟಿ ರೂ ಇನ್ ಜಿಗರ್ಟಿಗ್ ಟ್ರಸ್ಟ್ ಮೂಲಕ ಬಂದಿದೆ. ಕಾಂಗ್ರೆಸ್ ಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಏಕೈಕ ಡೋನರ್ ಆಗಿದ್ದು 156 ಕೋಟೊ ರೂ ಈ ಮೂಲಕ ಬಂದಿದೆ.
ದೇಣಿಗೆಯ ಮೂಲಕ ಪ್ರಾಪ್ತವಾಗುತ್ತಿರುವ ಧನದ ಪ್ರಮಾಣ, ಅದನ್ನು ಬಳಸುವ ಪದ್ದತಿ ಹಾಗೂ ಖರ್ಚಿನ ಪ್ರಮಾಣಿತ ಪರೀಕ್ಷೆಗಳ ಕೊರತೆ, ಭಾರತೀಯ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯ ಮೇಲೆ ಗಾಢವಾದ ಹೊಳೆಯನ್ನು ಎಳೆದು ಚರ್ಚೆ ತರಲು ಕಾರಣವಾಗಿದೆ. ಸದ್ಯ, 2,200 ಕೋಟಿ ರೂ ಗುರಿ ಸೇರಿಸಿರುವ ಬಿಜೆಪಿ, ಮುಂದಿನ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದ ದೇಣಿಗೆಯನ್ನು ತಾನು ಬಾಚಿಕೊಳ್ಳುವ ನಿರೀಕ್ಷೆಯಲ್ಲಿ ಬಂದಿದೆ.