ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮಧ್ಯೆ ಮಾತಿನ ಮಲ್ಲಯುದ್ಧ ಜೋರಾಗಿದೆ. ಡಿಕೆಶಿಯ ಪ್ರತಿ ಹೇಳಿಕೆಗೂ ಕೌಂಟರ್ ಕೊಡುತ್ತಿರುವ ಹೆಚ್ ಡಿಕೆ, ಈಗ ಮತ್ತೆ ವಾಗ್ದಳಿ ನಡೆಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಪದೇಪದೆ ತಾನೊಬ್ಬ ಸ್ಟ್ರೀಟ್ ಫೈಟರ್ ಅಂತ ಹೇಳ್ತಾರೆ. ಅದರಲ್ಲಿ ಯಾವುದೇ ಸಂಶಯವೇ ನಿಮಗೆ ಬೇಡ.
ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಗರಡಿಯಲ್ಲಿ ಬೆಳೆದವರು ಸ್ಟ್ರೀಟ್ ಫೈಟರ್ ಆಗದೆ ಮತ್ತೇನಾಗ್ತಾರೆ. ನನ್ನ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರ ನೋಡಿ ಅದ್ಯಾವನೋ ಅಲೂಗಡ್ಡೆ ಮಾರಿ ಕುಮಾರಸ್ವಾಮಿ ಇಷ್ಟು ಆಸ್ತಿ ಗಳಿಸಿದರೇ ಅನ್ನುತ್ತಾನೆ, ಅವನು ಬಂದು ಬಿಡದಿಯಲ್ಲಿರುವ ತನ್ನ ತೋಟವನ್ನು ನೋಡಲಿ, ತಾನೊಬ್ಬ ರೈತನ ಮಗ, ಕಷ್ಟಪಟ್ಟು ಸಂಪಾದನೆ ಮಾಡಿದ್ದೇನೆಯೇ ಹೊರತು ಬೇರೆಯವರ ಹಾಗೆ ಸರ್ಕಾರಿ ಭೂಮಿಗಳಿಗೆ ಬೇಲಿ ಹಾಕಿ ಸಂಪಾದನೆ ಮಾಡಿಲ್ಲ ಎಂದು ಏಕವಚನದಲೇ ಕಿಡಿಕಾರಿದರು.