ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ದಾಳಿ, ಕಲ್ಲು ತೂರಾಟದಿಂದ ಮುಕ್ತಿ ಸಿಕ್ಕಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗಾಗಿ ಜಮ್ಮು ಕಾಶ್ಮೀರದ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಗಡಿಯಾಚೆಗಿನ ಗುಂಡಿನ ದಾಳಿಯ ಭಯವಿಲ್ಲದೆ ಈ ಭಾರಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಉಧಂಪುರದಲ್ಲಿ ಚುನಾವಣಾ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಜಮ್ಮು ಮತ್ತು ಕಾಶ್ಮೀರದ ಜನರ ದೀರ್ಘಾವಧಿಯ ನೋವುಗಳನ್ನು ಕೊನೆಗೊಳಿಸುವ ಕೊಟ್ಟ ಭರವಸೆ ಈಡೇರಿಸಿರುವ ತೃಪ್ತಿ ಇದೆ. ಸಂವಿಧಾನದ 370ನೇ ವಿಧಿಯನ್ನು ಸಾಧ್ಯವಾದರೆ ಮತ್ತೆ ತನ್ನಿ ನೋಡೋಣ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು. ಇಲ್ಲಿಯವರೆಗೆ ನಡೆದಿರುವುದು ಕೇವಲ ಟ್ರೇಲರ್. ನಾನು ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಅದ್ಭುತವಾದ ಯೋಚನೆಗಳನ್ನು ನೀಡಲು ಕೆಲಸ ಮಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಮಯ ದೂರವಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುತ್ತದೆ ಅಂತ ಹೇಳಿದ್ರು.