ಟಾಲಿವುಡ್ ನಲ್ಲಿ ಮೆಗಾ ಪವರ್ ಸ್ಟಾರ್ ಅಂತಾನೇ ಫೇಮಸ್ ಆಗಿರೋ ನಟ ರಾಮ್ ಚರಣ್ ಈಗ ಡಾಕ್ಟರ್ ಆಗಿದ್ದಾರೆ. ನೀವು ಅಂದ್ಕೊಂಡಗೆ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಿಲ್ಲ. ಬದಲಾಗಿ ರಾಮ್ ಚರಣ್ಗೆ ಚೆನ್ನೈನ ವೇಲ್ಸ್ ಯೂನಿರ್ವಸಿಟಿ ಗೌರವ ಡಾಕ್ಟರೇಟ್ (Honorary Doctorate) ಘೋಷಣೆ ಮಾಡಿದೆ. ನಟ ರಾಮ್ ಚರಣ್ ಮೊದಲ ಸಿನಿಮಾ ಚೀರುತ ಸೇರಿ ಅನೇಕ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಅಲ್ಲದೇ ನಂದಿ ಪ್ರಶಸ್ತಿ, ಫಿಲ್ಮ್ಫೇರ್, ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹೀಗೆ ಆನೇಕ ಪ್ರಶಸ್ತಿಗಳನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಅವರ “RRR” ಚಿತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ವಿಮರ್ಶಕರ ಆಯ್ಕೆ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ರು. ರಾಮ್ ಚರಣ್ ಅವರು ಸಿನಿಮಾ ರಂಗದಲ್ಲಿ ಸಲ್ಲಿಸಿದ ಕೊಡುಗೆಗಾಗಿ ವೇಲ್ಸ್ ವಿವಿಯಿಂದ ಈಗ ಗೌರವ ಡಾಕ್ಟರೇಟ್ ಘೋಷಣೆ ಆಗಿದೆ. ತಮ್ಮ ನೆಚ್ಚಿನ ನಟನಿಗೆ ಡಾಕ್ಟರೇಟ್ ಸಿಕ್ಕಿದ್ದಕ್ಕೆ ಫ್ಯಾನ್ಸ್ ಫುಲ್ ಜೋಶ್ನಲ್ಲಿದ್ದಾರೆ.