ಧಾರವಾಡ ಲೋಕಸಭಾ ಕ್ಷೇತ್ರ ಈಗ ರಾಜ್ಯದ ಕೇಂದ್ರಬಿಂದುವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ತಿರುಗಿಬಿದ್ದಿರುವ ಲಿಂಗಾಯತ ಸ್ವಾಮೀಜಿ ದಿಂಗಾಲೇಶ್ವರ ಶ್ರೀಗಳು ಕೆರಳಿಕೆಂಡವಾಗಿದ್ದಾರೆ. ಆರ್ಎಸ್ಎಸ್ ಭದ್ರಕೋಟೆಯಲ್ಲಿ ಈಗ ಜಾತಿ ಕಾಳಗ ಜೋರಾಗಿದ್ದು, ಸ್ವತಂತ್ರ ಅಭ್ಯರ್ಥಿ ಆಗಿ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿಯುತ್ತಿದ್ದಾರೆ. ಹೀಗೆ ಕಣದಲ್ಲಿರುವ ಸ್ವಾಮೀಜಿಗಳು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೋಶಿ ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ನಾಮಪತ್ರ ಸಲ್ಲಿಸದಂತೆ ನನ್ನ ಮಠದ ಭಕ್ತರ ಮೂಲಕವೇ ಒತ್ತಡ ಹೇರುವ ಕುತಂತ್ರ ಮಾಡಿದ್ದಾರೆ ಅಂತ ಶ್ರೀಗಳು ಆರೋಪಿಸಿದ್ದಾರೆ.