ರಾಜ್ಯ ಬಜೆಟ್ ಮಂಡಣೆಗೆ ಮುಹೂರ್ತ ಫಿಕ್ಸ್ ಆಗಿದೆ . ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16 ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಸಿದ್ದರಾಮಯ್ಯ ಅವರು ಅತೀ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಎಂಬ ಗೌರವವನ್ನು ಹೊಂದಿದ್ದಾರೆ. ವಿಧಾನಸೌಧ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸಿದ್ದರಾಮಯ್ಯ ಕರ್ನಾಟಕದ ಆರ್ಥಿಕ ಪ್ರಗತಿಗೆ ಮತ್ತೊಂದು ಐತಿಹಾಸಿಕ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ .
ಜಂಟಿ ಅಧಿವೇಶನ ಮುಂದುವರೆದ ಭಾಗವಾಗಿ ಬಜೆಟ್ ಅಧಿವೇಶನ ನಡೆಯಲಿದೆ . ಈ ಅಧಿವೇಶನ ಒಟ್ಟು ಮೂರು ವಾರಗಳ ಕಾಲ ನಡೆಸಲು ರ್ತೀಮಾನಿಸಲಾಗಿದೆ . ಹೊಸ ವರ್ಷದ ಮೊದಲ ಸಚಿವ ಸಂಪುಟ ಸಭೆ ಜನವರಿ 2 ರಂದು ನಡೆಯಲಿದೆ . ಈ ಬಗ್ಗೆ ಈಗಾಗಲೇ ಅಧಿಕೃತ ಅದೇಶ ಹೊರಡಿಸಲಾಗಿದೆ .
ಬಜೆಟ್ ಅಧಿವೇಶನದ ಪೂರ್ವದಲ್ಲಿ ಮಾರ್ಚ್ 10 ರಿಂದ ನಾಲ್ಕ ದಿನಗಳ ಕಾಲ ಜಂಟಿ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ . ಸಿಎಂ ಸಿದ್ದರಾಮಯ್ಯ ಅವರು 16 ನೇ ಬಜೆಟ್ ಅನ್ನೂ ಮಾರ್ಚ್ 14ರಂದು ಮಂಡಿಸಲಿದ್ದಾರೆ . ಈ ಮೂಲಕ ಮತ್ತೊಂದು ದಾಖಲೆ ಬರೆಯಲಿದ್ದಾರೆ .
ಮಾರ್ಚ್ 10 ರಂದು ಸೋಮವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ವಿಧಾನ ಮಂಡಲ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಒಟ್ಟು ನಾಲ್ಕು ದಿನಗಳು ಕಲಾಪ ನಡೆಯಲಿದೆ. ಸಿದ್ದರಾಮಯ್ಯ ಅವರು, ಜ.2 ರಿಂದ ಇಲಾಖಾವಾರು ಪ್ರಗತಿ ಪರಿಶೀಲನೆ ಜತೆಜತೆಗೆ, ಬಜೆಟ್ ತಯಾರಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಈ ಬಾರಿ ಬಜೆಟ್ನಲ್ಲಿ ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ , ಕೃಷಿ , ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಕಳೆದ ಬಾರಿ ಬಜೆಟ್ನಲ್ಲಿ ಘೋಷಿಸಲಾಗಿದ್ದ ಬಹುತೇಕ ಯೋಜನೆಗಳು ಜಾರಿಯಾಗಿಲ್ಲ ಎಂಬ ಪ್ರತಿಪಕ್ಷದ ಶಂಕೆಗಳಿಗೆ ಈ ಬಜೆಟ್ನಲ್ಲಿ ಉತ್ತರ ದೊರೆಯಬಹುದಾಗಿದೆ.
ರಾಜ್ಯದ ಆದಾಯ ಹೆಚ್ಚಿಸಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ತೇಗೆದುಕೊಳ್ಳಲಿದೆ . ಬಜೆಟ್ ಮಂಡನೆ ಸದನದಲ್ಲಿ ಒಂದು ಹೊಸ ಪ್ರಚೋದನೆ ಸೃಷ್ಟಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಸಿದ್ದರಾಮಯ್ಯನವರ ಆರ್ಥಿಕ ತರ್ಕ, ಸಾಮಾಜಿಕ ಪ್ರಯತ್ನಗಳು, ಬಜೆಟ್ ಮಂಡನೆಯ ಮೂಲಕ ರಾಜ್ಯದ ಪ್ರಗತಿಯನ್ನು ಇನ್ನಷ್ಟು ಬಲಪಡಿಸಲಿ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿ ಮುಡಿಸಿದೆ .