21 ವರ್ಷದ ಥಾಯ್ Influencer ಒಬ್ಬ ಎಣ್ಣೆ ಹೊಡೆಯುವ ಚಾಲೆಂಜ್ನಲ್ಲಿ ಭಾಗವಹಿಸಿ ಸಾವನ್ನಪ್ಪಿದ್ದಾನೆ. ಒಂದೇ ಗುಟುಕಿಗೆ 350 ಎಂಎಲ್ ವಿಸ್ಕಿಯ ಬಾಟ್ಲಿಯನ್ನು ಕುಡಿದರೆ 30 ಸಾವಿರ ಬಹ್ (75 ಸಾವಿರ ರೂ.) ನೀಡುವುದಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಗಟಗಟನೆ ಕುಡಿದು ಸಾವನ್ನಪ್ಪಿದ್ದಾನೆ.
ಈ ಯುವಕ ಈ ಸವಾಲನ್ನು ಸ್ವೀಕರಿಸಿ ಗೆದ್ದು ಬೀಗಿದ್ದಾನೆ. ಗೆದ್ದ ಖುಷಿಯಲ್ಲಿ ಇದ್ದ ಯುವಕನಿಗೆ ಶಾಕ್ ಎದುರಾಗಿತ್ತು. ಕಂಟ ಪೂರ್ತಿ ಕುಡಿದಿದ್ದ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ‘ಬ್ಯಾಂಕ್ ಲೀಸೆಸ್ಟರ್’ ಎಂದು ಕರೆಯಲ್ಪಡುವ ಠಾಣಕರನ್ ಕಂಠಿ ಅವರು ಗುರುವಾರ ಮುಂಜಾನೆ 3:40 ಕ್ಕೆ ಸಾಂಗ್ಲಿನಾಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ಧಾನೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಠಾಣಕರನ್ ಅವರು ಆಲ್ಕೋಹಾಲ್ ವಿಷದಿಂದ ಹೃದಯಾಘಾತ ಸಂಭವಿಸಿದೆ. ಈ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಹಲವು ಮಾಹಿತಿಯ ಪ್ರಕಾರ ಇಂತಹ ಒಂದು ಮಾರಣಾಂತಿಕ ಚಾಲೆಂಜ್ ದಿನಕ್ಕೂ ಮೊದಲು ಈ ವ್ಯಕ್ತಿ ಸಿಕ್ಕಾಪಟ್ಟೆ ಕುಡಿದಿದ್ದ ಎಂದು ತಿಳಿದುಬಂದಿದೆ. ಠಾಣಕರನ್ ಈ ಹಿಂದೆಯೂ ಹಲವಾರು ಎಣ್ಣೆ ಹೊಡೆಯುವ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಎಣ್ಣೆ ಹೊಡೆಯುವ ಅನೇಕ ವೀಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿವೆ. ಸದ್ಯ ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಠಾಣಕರನ್ ಗೆ ಸಂಬಂಧಿಸಿದ ಆನ್ಲೈನ್ ಕಂಟೆಂಟ್ ಕ್ರಿಯೇಟರ್ಗಳ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಠಾಣಕರನ್ 350 ಎಂಎಲ್ ಬಾಟ್ಲಿಯನ್ನು ಕುಡಿದು ಮುಗಿಸಿ ವಾಂತಿ ಮಾಡಿಕೊಂಡಿದ್ದಾನೆ. ನಂತರ ಅದೇ ಸಮಯದಲ್ಲಿ ಮತ್ತೊಂದು ಬಾಟ್ಲಿಯನ್ನು ಕುಡಿದು ಮೃತಪಟ್ಟಿದ್ದಾರೆ ಎಂದು ಶಂಕಿತ ಐವರು ಸಾಕ್ಷಿಗಳಲ್ಲಿ ಒಬ್ಬರು ಹೇಳಿದ್ದಾರೆ ಎಂದು ಥಾಯ್ ಮಾಧ್ಯಮ ವರದಿ ಮಾಡಿದೆ. ಯಾರೇ ಆಗಲಿ ಲೈಕ್ಸ್, ಕಾಮೆಂಟ್ಸ್ ಗಳಿಗಾಗಿ ಒಬ್ಬ ವ್ಯಕ್ತಿಯ ಜೀವದ ಜೊತೆ ಆಟವಾಡುವುದು ಅಕ್ಷಮ್ಯ ಅಪರಾದ. ದುಡ್ಡಿನ ಆಸೆಗೆ ಇಂತಹ ಕೃತ್ಯಗಳಲ್ಲಿ ಭಾಗವಹಿಸುವು ಅಪರಾಧವೇ ಸರಿ.
ತಮ್ಮ ಆರೋಗ್ಯದ ಬಗ್ಗ ಕಾಳಜಿ ತೋರದೆ, ಕಂಠ ಪೂರ್ತಿ ಕುಡಿದು ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಮಧ್ಯಪಾನ ಮಾಡುವವರನ್ನು ಬೆಚ್ಚಿಬೀಳಿಸಿದೆ.