ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಧಿಸಿದ ಆರೋಪಿಗಳನ್ನು, ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕರ್ನಾಟಕ ಪೊಲೀಸರಿಗೆ ಅಭಿನಂದಿಸಿದ್ದಾರೆ. ಸ್ಫೋಟದ ಆ ದಿನ ಸಿಸಿಟಿವಿಯಲ್ಲಿ ಸೆರೆಯಾದ ಬೇರೆ ಬೇರೆ ಅಂಶಗಳನ್ನ ಪರಿಶೀಲಿಸಿ ಎನ್ಐಎ ತನಿಖೆ ಆರಂಭಿಸಿತ್ತು. ಈ ಹಿಂದೆ ಶಿವಮೊಗ್ಗ ಬ್ಲಾಸ್ಟ್ ನಲ್ಲಿ ಇರುವ ವ್ಯಕ್ತಿಗಳು ಎಂಬ ಗುಮಾನಿ ಬಂದಾಗ, ಈ ವ್ಯಕ್ತಿಯದ್ದು ತೀರ್ಥಹಳ್ಳಿ ಮೂಲ ಎಂಬುದು ಗೊತ್ತಾಗಿದೆ. ಮುಸಾವಿ ಹಾಗೂ ಮತಿನ್ ಪಶ್ಚಿಮ ಬಂಗಾಳದ ದಿಗಾ ಎಂಬ ಊರಿನ ಹೋಟೆಲ್ನಲ್ಲಿ ಸಿಕ್ಕಿದ್ದಾರೆ. ಇವರನ್ನು ಬೆಂಗಳೂರಿಗೆ ಕರೆತಂದು ಪೊಲೀಸರಿಗೆ ಹ್ಯಾಂಡ್ ಓವರ್ ಮಾಡಿ ತನಿಖೆ ಮಾಡ್ತಾರೆ. ಬಂಧನವನ್ನ ಎನ್ಐಎ ಯವರು ಖಚಿತ ಪಡಿಸಿದ್ದಾರೆ. ವಿಚಾರಣೆ ವೇಳೆ ಬೇರೆ ಸಂಘಟನೆ ಜೊತೆಗೆ ನಂಟು ಇದೆಯಾ.? ಎಂಬುವುದು ಗೊತ್ತಾಗಲಿದೆ ಎಂದು ತಿಳಿಸಿದರು.