ಒಂದೆಡೆ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ರೆ, ಇತ್ತ ಝಣಝಣ ಕಾಂಚಾಣವೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಜಯನಗರದ 4ನೇ ಹಂತದಲ್ಲಿ, ಮತದಾರರಿಗೆ ಹಂಚಲು ತಂದಿದ್ದ ಅಕ್ರಮ ಹಣ ಜಪ್ತಿ ಮಾಡಲಾಗಿದೆ. ಎರಡು ವಾಹನಗಳಲ್ಲಿ ಹಣ ಸಾಗಿಸುತ್ತಿದ್ದವರು ಚುನಾವಣಾಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರನ್ನ ವಿಚಾರಿಸಲು ಯತ್ನಿಸಿದಾಗ ವಾಹನ ಮಾಲೀಕರು ಬೇರೆ fortuner ಕಾರಿನಲ್ಲಿ ತಪ್ಪಿಸಿಕೊಂಡಿದ್ದಾರೆ. ವಾಹನದಲ್ಲಿ ಲಕ್ಷಾಂತರ ರೂಪಾಯಿ ಹಣ ಇರುವುದು ಪತ್ತೆಯಾಗಿದ್ದು, ಸಿಕ್ಕಿರೋ ಹಣ ಯಾರದ್ದು ಎಂದು ತನಿಖೆ ಮುಂದುವರೆದಿದೆ.